ಬೆಂಗಳೂರು : ನೆಲಮಂಗಲ ರಸ್ತೆಯಲ್ಲಿ ಆರ್‌ಟಿಓ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದು ಸುಮಾರು 35ಕ್ಕೂ ಹೆಚ್ಚು ಖಾಸಗಿ ಬಸ್ ಗಳನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ತೆರಿಗೆ ಮತ್ತು ಸಾರಿಗೆ ನಿಯಮ ಮೀರಿ ಓಡಾಡುತ್ತಿದ್ದ ಖಾಸಗಿ ಬಸ್ ಗಳನ್ನು ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ.
ಬೆಂಗಳೂರು ತುಮಕೂರು ರಸ್ತೆಯಲ್ಲಿ ಆರ್‌ಟಿಓ ಅಧಿಕಾರಿಗಳು ಈ ಒಂದು ಕಾರ್ಯಾಚರಣೆ ನಡೆಸಿದ್ದು ಬೇರೆ ಬೇರೆ ಊರಿಗೆ ತೆರಳುತ್ತಿದ್ದ ಖಾಸಗಿ ಬಸ್ ಗಳನ್ನು ಸಿಜ್ ಮಾಡಿದ್ದಾರೆ ಈ ನೆಲೆಯಲ್ಲಿ ಅಧಿಕಾರಿಗಳು ಪ್ರಯಾಣಿಕರಿಗೆ ಬದಲಿ ವ್ಯವಸ್ಥೆ ಮಾಡಿದರು ಮೆಟ್ರೋ ಮೂಲಕ ಬಸ್ ನಿಲ್ದಾಣಕ್ಕೆ ಕೆಲವು ಪ್ರಯಾಣಿಕರು ಹಿಂತಿರುಗಿದ್ದಾರೆ.
ಹೆಚ್ಚುವರಿ ಆಯುಕ್ತ ಓಂಕಾರೇಶ್ವರ ಜಂಟಿ ಆಯುಕ್ತ ಶೋಭಾ ನೇತೃತ್ವದಲ್ಲಿ ಈ ಒಂದು ಕಾರ್ಯಚರಣೆ ನಡೆಸಿದ್ದು ಯಾವುದೇ ಸುರಕ್ಷತೆ ಕ್ರಮ ವಹಿಸಿದ ಖಾಸಗಿ ಬಸ್ ಗಳನ್ನು ಮಾಡಲಾಗಿದೆ. ಯಶವಂತಪುರ, ರಾಜಾಜಿನಗರ, ಜಾಲಹಳ್ಳಿ, ಟಿ ವಿ ಎಸ್ ಕ್ರಾಸ್, ಪೀಣ್ಯ ಇಂಡಸ್ಟ್ರಿಯಲ್ ಏರಿಯಾ ತುಮಕೂರು ರಸ್ತೆ ಸೇರಿದಂತೆ ಸುಮಾರು 10 ಕಡೆ ಸಾರಿಗೆ ಇಲಾಖೆ ಅಧಿಕಾರಿಗಳಿಂದ ಈ ಒಂದು ಕಾರ್ಯಾಚರಣೆ ನಡೆದಿದೆ ರಾಜ್ಯದಲ್ಲಿ ಖಾಸಗಿ ಬಸ್ಗಳು ಅನಧಿಕೃತವಾಗಿ ಸಂಚಾರ ಮಾಡುತ್ತಿದ್ದವು. ಇದರಿಂದ ರಾಜ್ಯದ ಬೊಕ್ಕಸಕ್ಕೆ ನೂರಾರು ಕೋಟಿ ರೂಪಾಯಿ ನಷ್ಟವಾಗುತ್ತಿತ್ತು ಬೆಳ್ಳಂ ಬೆಳಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ.








