ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯ ಚಿತ್ತಾಪುರದಲ್ಲಿ ಪಥಸಂಚಲನಕ್ಕಾಗಿ ಆರ್ ಎಸ್ ಎಸ್ ನಿಂದ ಅರ್ಜಿ ಸಲ್ಲಿಸಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಕಲ್ಬುರ್ಗಿಯ ಹೈಕೋರ್ಟ್ ಪೀಠದಲ್ಲಿ ಇಂದು ಮತ್ತೆ ಅರ್ಜಿಯ ಕುರಿತು ವಿಚಾರಣೆ ನಡೆಯಲಿದೆ ಇಂದು ಮಧ್ಯಾಹ್ನ 2:30ಕ್ಕೆ ಕಲ್ಬುರ್ಗಿ ಹೈಕೋರ್ಟ್ ಪೀಠದ ನ್ಯಾಯಮೂರ್ತಿಗಳು ವಿಚಾರಣೆ ನಡೆಸಲಿದ್ದಾರೆ.
ಹೈಕೋರ್ಟ್ ಆದೇಶದಂತೆ ಎ ಜಿ ಶಶಿಕಿರಣಶೆಟ್ಟಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಶಾಂತಿ ಸಭೆ ನಡೆದ ಬಳಿಕ ವಿಚಾರಣೆ ನಡೆಯಲಿದೆ ಆರ್ ಎಸ್ ಎಸ್ ಅರ್ಜಿದಾರರ ಪರವಾಗಿ ಹಿರಿಯ ವಕೀಲ ಅರುಣ್ ಶ್ಯಾಂ ಅವರು ವಾದ ಮಂಡಿಸಲಿದ್ದಾರೆ. ನವೆಂಬರ್ 13 ಅಥವಾ 16 ರಂದು ಆರ್ಎಸ್ ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೇಳಿದೆ. ಹೀಗಾಗಿ ಇಂದು ಆರ್ ಎಸ್ ಎಸ್ ಪಥ ಸಂಚಲನದ ದಿನಾಂಕ ನಿಗದಿ ಆಗುವ ಸಾಧ್ಯತೆ ಇದೆ. ಹಾಗಾಗಿ ಇಡೀ ರಾಜ್ಯದ ಜನತೆಯ ಚಿತ್ತ ಹೈಕೋರ್ಟ್ ಪೀಠದತ್ತ ಇದೆ.








