ಬೆಂಗಳೂರು : ಪ್ರತಿ ಟನ್ ಕಬ್ಬಿಗೆ 3500 ನಿಗದಿ ಮಾಡುವಂತೆ ಕಬ್ಬು ಬೆಳೆಗಾರರು ಈಗಾಗಲೇ ಭಾರಿ ಪ್ರತಿಭಟನೆ ನಡೆಸುತ್ತಿದ್ದು, ಇಂದು ಬೆಳಿಗ್ಗೆ ಕಾರ್ಖಾನೆ ಮಾಲೀಕರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಲಿದ್ದು ಬಳಿಕ ಮಧ್ಯಾಹ್ನ 1 ಗಂಟೆಗೆ ರೈತ ಮುಖಂಡರ ಜೊತೆಗೆ ಸಿಎಂ ಸಭೆ ನಡೆಸಲಿದ್ದಾರೆ. ಆದರೆ ರೈತ ಮುಖಂಡರು ಈ ಒಂದು ಸಭೆಯನ್ನು ಬಹಿಷ್ಕರಿಸಿದ್ದು, ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿ 3500 ಪ್ರತಿ ಟನ್ ಕಬ್ಬಿಗೆ ನಿಗದಿ ಮಾಡಿ ಎಂದು ಪಟ್ಟು ಹಿಡಿದಿದ್ದಾರೆ.
ಈ ಮಧ್ಯ ರಾಜ್ಯದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಚರ್ಚಿಸಲು ತುರ್ತು ಭೇಟಿಗೆ ಅವಕಾಶ ನೀಡುವಂತೆ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.ರಾಜ್ಯದಲ್ಲಿ ಕಬ್ಬು ಬೆಳೆಗಾರರು ತೀವ್ರ ಪ್ರತಿಭಟನೆ ನಡೆಸುತ್ತಿದ್ದಾರೆ. ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆ ಮಾತುಕತೆಗೆ ರಾಜ್ಯ ಸರ್ಕಾರ ನಿರಂತರ ಪ್ರಯತ್ನ ಮಾಡುತ್ತಿದ್ದರೂ, ಪ್ರತಿಭಟನೆ ತೀವ್ರ ಸ್ವರೂಪಕ್ಕೆ ಹೋಗುತ್ತಿದೆ.
ಇದರಿಂದ ರೈತ ಸಮುದಾಯದಲ್ಲಿ ಪ್ರಕ್ಷುಬ್ಧತೆ ಹೆಚ್ಚಾಗಿದೆ. ರೈತರ ಜೊತೆ ರಾಜ್ಯ ಸರ್ಕಾರ ಹಲವು ಸುತ್ತಿನ ಸಭೆ ನಡೆಸಿದೆ. ಬೆಳಗಾವಿ ಡಿಸಿ ಶೇ.11.25 ರಿಕವರಿ ಇದ್ದರೆ ಪ್ರತಿ ಟನ್ಗೆ 3,200 ರೂ. ಮತ್ತು ಶೇ.10.25 ರಿಕವರಿ ದರ ಇದ್ದರೆ ಪ್ರತಿ ಟನ್ಗೆ 3,100 ರೂ. ಪಾವತಿ ಮಾಡುವಂತೆ ಸಕ್ಕರೆ ಕಾರ್ಖಾನೆಗಳಿಗೆ ಸಲಹೆ ನೀಡಿದ್ದರು. ಇದರಲ್ಲಿ ಸಾರಿಗೆ ವೆಚ್ಚ ಹಾಗೂ ಕಟಾವು ವೆಚ್ಚ ಹೊರತಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಇದಕ್ಕೆ ಒಪ್ಪದ ರೈತರು ಹೆದ್ದಾರಿ ಬಂದ್ ಹಾಗೂ ಇತರೆ ಹೋರಾಟ ಕ್ರಮಗಳನ್ನು ನಡೆಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಕೇಂದ್ರ ಸರ್ಕಾರ 2025-26 ಸಾಲಿಗೆ ಶೇ.10.25 ಸಕ್ಕರೆ ರಿಕವರಿ ಇದ್ದಲ್ಲಿ ಪ್ರತಿ ಟನ್ ಕಬ್ಬಿಗೆ 3,550 ರೂ. ಎಫ್ಆರ್ಪಿ ದರ ನಿಗದಿ ಮಾಡಿದೆ. ಆದರೆ, ಕಟಾವು ವೆಚ್ಚ ಮತ್ತು ಸಾಗಾಟ ವೆಚ್ಚ ಪ್ರತಿ ಟನ್ಗೆ 800 ರೂ. ನಿಂದ 1,900 ರೂ. ನಷ್ಟು ಕಡಿತಗೊಳಿಸಿದ ಬಳಿಕ ರೈತರಿಗೆ ಪ್ರತಿ ಟನ್ಗೆ ಕೇವಲ 2,600-3,000 ರೂ. ಮಾತ್ರ ತಲುಪುತ್ತದೆ ಎಂದು ವಿವರಿಸಿದ್ದಾರೆ.








