ಬೆಂಗಳೂರು : ಕಬ್ಬಿನ ದರ ಹೆಚ್ಚಳ ಮಾಡುವಂತೆ ಬೆಳಗಾವಿ ಜಿಲ್ಲೆಯ ರೈತರು ಪ್ರತಿಭಟನೆ ಮಾಡುತ್ತಿದ್ದು, ಈ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ನಾಳೆ ಬೆಳಿಗ್ಗೆ 11 ಗಂಟೆಗೆ ಸಕ್ಕರೆ ಕಾರ್ಖಾನೆ ಮಾಲೀಕರ ಜೊತೆಗೆ ಸಭೆ ನಡೆಸುತ್ತೇನೆ ಎಂದು ಸಚಿವ ಸಂಪುಟ ಸಭೆಯವಳಿಕ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರ ಪ್ರತಿಭಟನೆಯ ಬಗ್ಗೆ ಚರ್ಚೆ ಮಾಡುತ್ತೇವೆ. ನಾಳೆ ಎಫ್‌ಆರ್‌ಪಿ ಬಗ್ಗೆಯೂ ಚರ್ಚೆ ಮಾಡುತ್ತೇವೆ . ನಾಳೆ ಪ್ರಧಾನ ಮಂತ್ರಿಗಳಿಗೆ ನಾನು ಪತ್ರ ಬರೆಯುತ್ತೇನೆ. ನನಗೆ ಭೇಟಿ ಮಾಡೋಕೆ ಅವಕಾಶ ಕೊಡಬೇಕು ಅಂತ ಪತ್ರ ಬರೆಯುತ್ತೇನೆ ರೈತರ ಸಮಸ್ಯೆ ಬಗ್ಗೆ ನಾನು ಮೋದಿ ಜೊತೆಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ನಾಳೆ ಮಧ್ಯಾಹ್ನ ಒಂದು ಗಂಟೆಗೆ ರೈತ ಮುಖಂಡರ ಜೊತೆಗೆ ಸಭೆ ನಡೆಸುತ್ತೇನೆ ಬೆಳಗಾವಿ ಹಾವೇರಿ ಬಾಗಲಕೋಟೆ ಹಾಗೂ ವಿಜಯಪುರ ರೈತರ ಜೊತೆ ಸಭೆ ನಡೆಸುತ್ತೇನೆ ಕಬ್ಬು ಬೆಳೆಗಾರರ ಬೇಡಿಕೆ ಬಗ್ಗೆ ಸಭೆಯಲ್ಲಿ ಸುತ್ತೇವೆ ರಾಜ್ಯದ ಎಲ್ಲಾ ರೈತ ಮುಖಂಡರ ಜೊತೆಗೆ ಸಭೆ ನಡೆಸುತ್ತಿಲ್ಲ ಹೋರಾಟ ನಡೆಯುತ್ತಿರುವ ಜಿಲ್ಲೆಗಳ ರೈತರ ಜೊತೆ ಸಭೆ ನಡೆಸುತ್ತೇವೆ ಎನ್ ಸಿ. ಎಂ ಸಿದ್ದರಾಮಯ್ಯ ತಿಳಿಸಿದರು.
ರೈತರ ಹೋರಾಟದ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಪತ್ರ ಬರೆಯುತ್ತೇನೆ. ರೈತರ ಬೇಡಿಕೆ ಬಗ್ಗೆ ಚರ್ಚೆಗೆ ಸಮಯ ನೀಡಲು ಪತ್ರ ಬರೆಯುತ್ತೇನೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ನಾಳೆ ಪತ್ರ ಬರೆದು ಭೇಟಿಗೆ ಸಮಯ ಕೋರುತ್ತೇನೆ. ಕಬ್ಬು ಬೆಳೆಗಾರರ ಪ್ರತಿಭಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ನಮ್ಮದು ರೈತರ ಪರಸರ ಪ್ರತಿ ವರ್ಷ ಎಫ್ ಆರ್ ಪಿ ಯನ್ನು ನಿಗದಿ ಮಾಡುವುದು ಕೇಂದ್ರ ಸರ್ಕಾರ. 6-5-2025 ರಂದು ಎಫ್ ಆರ್ ಪಿ ಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ.
2025 ಮತ್ತು 26 ನೇ ಸಾಲಿನಲ್ಲಿ 10.25 ರಿಕವರಿ ಇದ್ದರೆ ತನಗೆ 3500 ರೂಪಾಯಿ ನಿಗದಿ ಮಾಡುತ್ತದೆ 9.5 ರಿಕವರಿಗಿಂತ ಕಡಿಮೆ ಇದ್ದರೆ 3290.50 ನಿಗದಿ ಮಾಡಲಾಗಿದೆ ಇದರಲ್ಲಿ ಕಟಾವು ಸಾರಿಗೆ ವೆಚ್ಚವು ಸೇರಿರುತ್ತದೆ 9.5 ರಿಕವರಿಗಿಂತ ಕಡಿಮೆ ಇದ್ದರೆ 3290.50 ನಿಗದಿ ಮಾಡಲಾಗಿದೆ ಕೇಂದ್ರ ಸರ್ಕಾರವೇ ಎ ಪಾರ್ಪಿ ತೀರ್ಮಾನ ಮಾಡಬೇಕಾಗಿರುವುದು.ಇದನ್ನು ಜಾರಿಗೆ ತರುವುದು ಮಾತ್ರ ರಾಜ್ಯ ಸರ್ಕಾರದ ಕೆಲಸವಾಗಿದೆ. ಕಬ್ಬು ನಿಯಂತ್ರಣ ಕಾಯ್ದೆಯಲ್ಲಿ ಇದನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.ರಾಜ್ಯ ಸರ್ಕಾರ ತೂಕ ಸರಿ ಇದೆಯಾ? ಬೆಲೆ ಕೊಡುತ್ತಿದ್ದಾರೆ ಎನ್ನುವುದು ಅಷ್ಟೇ ನೋಡುತ್ತದೆ.
ನಿಗದಿತ ಸಮಯದಲ್ಲಿ ರೈತರಿಗೆ ಹಣ ಕೊಡುತ್ತಿದ್ದಾರಾ ಎಂಬುದನ್ನು ಅಷ್ಟೇ ನೋಡುವುದು. ಸಕ್ಕರೆ ಬೆಲೆ ನಿಯಂತ್ರಣ ಕೂಡ ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. 2017 ಮತ್ತು 18ರವರೆಗೆ ಪ್ರತಿಭಟನೆ ಕಬ್ಬಿಗೆ 9.5 ರಿಕವರಿಗಿತ್ತು 2021 22 ರವರೆಗೆ ಪ್ರತಿಭಟನೆ ಕಬ್ಬಿಗೆ 10 ರಿಕವರಿ ಇತ್ತು ಈಗ 10.25 ರಷ್ಟು ರಿಕವರಿ ಇದೆ. ಇದನ್ನು ಕೇಂದ್ರವೇ ನಿಗದಿ ಮಾಡುವುದು. ಪ್ರತಿ ಟನ್ ಗೆ ಕನಿಷ್ಠ 3500 ಕೊಡಬೇಕೆಂಬ ಆಗ್ರಹವಿದೆ ರೈತರ ಬೇಡಿಕೆ ಬಗ್ಗೆ ಚರ್ಚೆಗೆ ಸಮಯ ನೀಡಲು ಪ್ರಧಾನಮಂತ್ರಿಗೆ ಪತ್ರ ಬರೆಯುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.








