ಬೆಂಗಳೂರು : ರಾಜ್ಯದಲ್ಲಿ ಒಬ್ಬ ವಿಚಿತ್ರ ಕಳ್ಳನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಟೋರಿಯಸ್ ಕಳ್ಳನನ್ನು ಅರೆಸ್ಟ್ ಮಾಡಲಾಗಿದ್ದು, 5 ಜಿಲ್ಲೆಗೆ ಬೇಕಾಗಿದ್ದ ನಟೋರಿಯಸ್ ಕಳ್ಳ ಅರೆಸ್ಟ್ ಆಗಿದ್ದಾನೆ. ವಿದ್ಯಾರಣ್ಯಪುರ ಪೊಲೀಸರಿಂದ ಕಳ್ಳನ ಬಂಧನವಾಗಿದೆ. ಅಸ್ಲಾಂ ಪಾಷಾ ವಿರುದ್ಧ 150 ಪ್ರಕರಣ ದಾಖಲಾಗಿತ್ತು. ಬೆಂಗಳೂರು , ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಹಾವೇರಿ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿಯೂ ಈತ ಮನೆಗಳ ತನ ಮಾಡಿದ್ದ.
ಕದ್ದ ಮಾಲ್ ಅಲ್ಲಿ ದೇವರಿಗೆ ಪಾಲು!
ಕಳ್ಳತನದಲ್ಲೂ ಅಸ್ಲಾಂ ಪಾಶಾಗೆ ದೇವರ ಮೇಲೆ ನಂಬಿಕೆ ಹೆಚ್ಚಾಗಿತ್ತು. ಪ್ರತಿ ಬಾರಿಯೂ ಕದ್ದ ಮಾಲಿನಲ್ಲಿ ದೇವರಿಗೆ ಪಾಲು ನೀಡುತ್ತಿದ್ದ. ಕಳ್ಳತನ ಮಾಡಿ ಅಜ್ಮೀರ್ ದರ್ಗಾ ಗೆ ಪಾಶ ಹೋಗುತ್ತಿದ್ದ. ದರ್ಗಾದಲ್ಲಿ ಹುಂಡಿಗೆ ಹಣ ಹಾಕುತ್ತಿದ್ದ ಅಜ್ಮೀರ್ ದರ್ಗಾ ಗೆ ಪ್ರಾರ್ಥನೆ ಬಳಿಕ ಈತ ವಿಲಾಸಿ ಜೀವನ ನಡೆಸುತ್ತಿದ್ದ. ಇದೀಗ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಚಿನ್ನಾಭರಣ ಕಳ್ಳತನ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಈತ ಕಳ್ಳತನವನ್ನೇ ತನ್ನ ಕಾಯಕವನ್ನಾಗಿ ಮಾಡಿಕೊಂಡಿದ್ದ ಕಳೆದ 20 ವರ್ಷಗಳಿಂದ ಪಾಷಾ ಕಳ್ಳತನ ಕೆಲಸ ಮಾಡುತ್ತಿದ್ದ ಅಸ್ಲಾಂ ಪಾಶಾ ತಂದೆ ತಾಯಿಗೆ ಒಟ್ಟು ಏಳು ಜನ ಮಕ್ಕಳು. ಅವರಲ್ಲಿ ಮೂರು ಜನ ಮಕ್ಕಳಿಗೆ ಕಳ್ಳತನವೇ ಕಾಯಕವಾಗಿತ್ತು. ಮೂವರು ಕಳ್ಳತನ ಮಾಡಿ ಬಳಿಕ ವಿಲಾಸಿ ಜೀವನ ನಡೆಸುತ್ತಿದ್ದರು. ಇದೀಗ ವಿದ್ಯಾರಣ್ಯಪುರ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿ ಅಸ್ಲಾಂ ಪಾಶ ಪೊಲೀಸರ ಕೈಗೆ ಸಿಗಿ ಬಿದ್ದಿದ್ದಾನೆ ಒಟ್ಟು 150 ಪ್ರಕರಣಗಳು ಈತನ ಮೇಲೆ ದಾಖಲಾಗಿದ್ದವು.








