ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ಕುರಿತು ಈಗಾಗಲೇ ಭಾರಿ ಚರ್ಚೆ ನಡೆಯುತ್ತಿದ್ದು, ಇದರ ಮಧ್ಯ ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಅವರು ಸಿದ್ದರಾಮಯ್ಯ ಎಷ್ಟು ದಿನ ಸಿಎಂ ಆಗಿರುತ್ತಾರೋ ಅಷ್ಟು ದಿನವೂ ಅವರೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಸಿದ್ದರಾಮಯ್ಯನವರೇ ನಮ್ಮ ನಾಯಕರು ಅವರ ನೇತೃತ್ವದಲ್ಲಿಯೆ ಪಕ್ಷ ಸಂಘಟನೆ ನಡೆಯಲಿದೆ. ನಾಯಕತ್ವ ಬದಲಾವಣೆ ಎಲ್ಲವೂ ಕೂಡ ಊಹಾಪೋಹ. ಯಾವುದೇ ವಿಚಾರ ಕೂಡ ಪಕ್ಷದ ಮುಂದೆ ಇಲ್ಲ. ಐದು ವರ್ಷ ಆದಮೇಲೆ ಕೂಡ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಬಹುದು. ಅವರು ನಮ್ಮ ನಾಯಕರು ಅವರ ನಾಯಕತ್ವದಲ್ಲಿ ನಾವು ಪಕ್ಷವನ್ನು ಸಂಘಟನೆ ಮಾಡುತ್ತಿದ್ದೇವೆ ಪಕ್ಷವನ್ನು ಕಟ್ಟುತ್ತಿದ್ದು, ಮುಂದಿನ ಎಲ್ಲಾ ಚುನಾವಣೆಗಳು ಅವರ ನೇತೃತ್ವದಲ್ಲಿ ನಡೆಯಲಿವೆ ಎಂದು ತಿಳಿಸಿದರು.








