ನವದೆಹಲಿ : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಮಹದೇವಪುರ ಲೋಕಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿದೆ. ಅಲ್ಲದೆ ಆಳಂದ್ ಕ್ಷೇತ್ರದಲ್ಲೂ ಕೂಡ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಇದರ ಬೆನ್ನಲ್ಲೆ ಇದೀಗ ಹರಿಯಾಣದಲ್ಲಿ 25 ಲಕ್ಷ ಮತಗಳ ಅಂತರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ದೆಹಲಿಯ ಕಾಂಗ್ರೆಸ್ ಕಚೇರಿಯಲ್ಲಿ ರಾಹುಲ್ ಗಾಂಧಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಹರಿಯಾಣ ವಿಧಾನಸಭಾ ಚುನಾವಣೆಯಲ್ಲೂ ಮತಗಳ್ಳತನ ನಡೆದಿದೆ. ಸಿಎಂ ನಯಾಬ್ ಸಿಂಗ್ ಸೈನಿ ಮಾತು ಉಲ್ಲೇಖಿಸಿ ಈ ಒಂದು ಆರೋಪ ಮಾಡಿದ್ದು, ಸಿಎಂ ನವಾಬ್ ಸಿಂಗ್ ಸೈನಿ ವ್ಯವಸ್ಥೆ ಎಂದು ಹೇಳಿದ್ದಾರೆ ಅವರ ಮುಖದಲ್ಲಿ ನಗು ನೋಡಿ ನಮ್ಮ ಬಳಿ ಎಲ್ಲಾ ವ್ಯವಸ್ಥೆಗಳಿವೆ ಅಂತ ಸಿಎಂ ಹೇಳಿದ್ದರು. 22 ಸಾವಿರ ಮತಗಳ ಅಂತರ ನಮ್ಮ ಹಾಗೂ ಅವರ ನಡುವೆ ಇದೆ. ಈ ಮಹಿಳೆ ಹರಿಯಾಣದ 10 ಬೂತ್ ಗಳಲ್ಲಿ ಮತದಾನ ಮಾಡಿದ್ದಾಳೆ. ಬೇರೆ ಬೇರೆ ಹೆಸರಿನಲ್ಲಿ ಈ ಮಹಿಳೆ ಮತದಾನ ಮಾಡಿದ್ದಾಳೆ.
ರಾಯಿ ಕ್ಷೇತ್ರದ 10 ಬೂತ್ ಗಳಲ್ಲಿ 22 ಮತಗಳನ್ನು ಹಾಕಿದ್ದಾಳೆ. ಬರೋಬ್ಬರಿ 25 ಲಕ್ಷ ಮತಗಳ್ಳತನಕ್ಕೆ ಸಾಕ್ಷಿಯಾಗಿದ್ದಾಳೆ. ಚುನಾವಣಾ ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಪರ ವರದಿಗಳು ಬಂದಿದ್ದವು. ಫಲಿತಾಂಶದ ಬಳಿಕ ಬಿಜೆಪಿ ಅಭ್ಯರ್ಥಿಗಳು ಗೆದ್ದಿದ್ದರು. ನಾನು ಹೇಳುತ್ತಿರುವುದು 100% ಸತ್ಯ. ಮಧ್ಯಪ್ರದೇಶ ಮಹಾರಾಷ್ಟ್ರ ಛತ್ತೀಸ್ಗಡದಲ್ಲೂ ಇದೇ ರೀತಿ ದೂರು ನೀಡಲಾಗಿದೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.






