ಮಂಗಳೂರು : ಅಡಿಕೆ ಬೆಳಗಾರರಿಗೆ ನೆಮ್ಮದಿಯ ಸುದ್ದಿಯೊಂದು ಸಿಕ್ಕಿದ್ದು, ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ, ಅಡಿಕೆ ಸಾರಗಳು ಶಕ್ತಿಶಾಲಿ ಕ್ಯಾನ್ಸರ್ ಪ್ರತಿ ಬಂಧಕ ಗುಣಗಳನ್ನು ಹೊಂದಿವೆ ಎಂದು ಯೆನಪೊಯ ವಿಶ್ವವಿದ್ಯಾಲಯ ನಡೆಸಿದ ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಹೌದು,ಯೆನೆ ಪೊಯ ವಿಶ್ವವಿದ್ಯಾನಿಲಯವು ಅಡಿಕೆಯ ಮೇಲೆ ಸಂಶೋಧನಾ ಆಧಾರಿತ ಅಧ್ಯಯನ ನಡೆಸಿ ತಯಾರಿಸಿದ ವರದಿಯಲ್ಲಿ ಅಡಿಕೆಯ ಸಾರಗಳು ಕ್ಯಾನ್ಸರ್ ಕೋಶಗಳ ವೃದ್ಧಿ, ಚಲನೆ ಮತ್ತು ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆ ಯುತ್ತವೆ. ಇದು ಸಾಮಾನ್ಯ ಕೋಶಗಳಿಗೆ ಹಾನಿಯನ್ನುಂಟು ಮಾಡುವುದಿಲ್ಲ. ಸಂಪ್ರದಾಯಕವಾಗಿ ಸಂಸ್ಕರಿಸಿದ ಅಡಿಕೆಯನ್ನು ಬಳಸಿದರೆ ಆರೋಗ್ಯದಾಯಕ ಲಾಭಗಳಿವೆ ಎಂದು ತಿಳಿಸಲಾಗಿದೆ.
ಅಡಿಕೆ ಸಾರ ಕ್ಯಾನ್ಸರ್ ಕೋಶಗಳ ವೃದ್ಧಿ ಮತ್ತು ಹರಡುವಿಕೆಯನ್ನು ತಡೆಯುತ್ತದೆ ಎಂಬುದು ಸಂಶೋಧನೆಯಲ್ಲಿ ಪತ್ತೆಯಾಗಿದೆ. ಸಾಂಪ್ರದಾಯಿಕವಾಗಿ ಸಂಸ್ಕರಿಸಿ ದ ಅಡಿಕೆಯನ್ನು ಬಳಸಿದಲ್ಲಿ ಆರೋಗ್ಯದಾಯಕ ಲಾಭಗಳಿವೆ,ಅಡಿಕೆ ಸೇವನೆಯು ಆರೋಗ್ಯಕರ ಕೋಶಗಳಿಗೆ ಯಾವುದೇ ರೀತಿ ಹಾನಿ ಉಂಟು ಮಾಡುವುದಿಲ್ಲ ಎಂದು ಸಂಶೋಧನಾ ವರದಿಯಲ್ಲಿ ತಿಳಿದುಬಂದಿದೆ.








