ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಹತ್ಯೆಯಾಗಿದ್ದು, ಉಸಿರುಗಟ್ಟಿಸಿ ವೃದ್ಧೆಯೊಬ್ಬರನ್ನು ಕೊಲೆ ಮಾಡಿ ಮಾಂಗಲ್ಯ ಸರ ಕದ್ದು ದುಷ್ಕರ್ಮಿ ಪರಾರಿಯಾಗಿದ್ದಾನೆ.
ಶ್ರೀಲಕ್ಷ್ಮೀ (65) ಎಂಬುವರನ್ನು ದುಷ್ಕರ್ಮಿ ಹತ್ಯೆ ಮಾಡಿ ಮಾಂಗಲ್ಯ ಸರ ಕದ್ದು ಪರಾರಿಯಾಗಿದ್ದಾನೆ. ನಿನ್ನೆ ಬೆಳಗ್ಗೆ 9.30ಕ್ಕೆ ಪತಿ ಅಶ್ವತ್ಥ್ ಕೆಲಸಕ್ಕೆ ಹೋಗಿದ್ದರು. ಮಧ್ಯಾಹ್ನ 2.15ಕ್ಕೆ ಪತ್ನಿಗೆ ಕರೆ ಮಾಡಿದ್ದರು. ಆದರೆ ಪತ್ನಿ ಕರೆ ಸ್ವೀಕರಿಸದ ಹಿನ್ನೆಲೆಯಲ್ಲಿ ಮನೆ ಬಾಡಿಗೆದಾರನಿಗೆ ಕರೆ ಮಾಡಿದ್ದಾರೆ. ನನ್ನ ಹೆಂಡತಿ ಶ್ರೀಲಕ್ಷ್ಮಿ ಮಧ್ಯಾಹ್ನದಿಂದ ಕರೆ ತೆಗೆಯುತ್ತಿಲ್ಲ. ಹೋಗಿ ನೋಡುವಂತೆ ಬಾಡಿಗೆದಾರ ಫಣಿರಾಜ್ ಗೆ ತಿಳಿಸಿದ್ದಾರೆ.
ಈ ವೇಳೆ ತಾನು ಹೊರಗಡೆ ಇರೋದಾಗಿ ಫಣಿರಾಜ್ ಹೇಳಿದ್ದರು. ಬಳಿಕ ಸಂಜೆ 6 ಗಂಟೆಗೆ ಕರೆ ನಿಮ್ಮ ಹೆಂಡತಿ ನೆಲದ ಮೇಲೆ ಬಿದ್ದಿದ್ದಾರೆ ಎಂದು ಹೇಳಿದ್ದಾರೆ. ಬಂದು ನೋಡಿದಾಗ ಪತ್ನಿ ಉಸಿರಾಡುತ್ತಿರಲಿಲ್ಲ. ಬೆಡ್ ಮೇಲೆ ಮಲಗಿಸಿ ನೋಡಿದಾಗ ಗಾಯದ ಗುರುತು ಪತ್ತೆಯಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಗೆ ಪತಿ ದೂರು ನೀಡಿದ್ದಾರೆ. ಸದ್ಯ ಎಫ್ ಐಆರ್ ದಾಖಲಿಸಿಕೊಂಡ ಪೊಲೀಸರುಉ ತನಿಖೆ ಆರಂಭಿಸಿದ್ದಾರೆ.








