ಬೆಂಗಳೂರು: ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಏಣಿಕೆಗೆ ಚುನಾವಣಾ ಆಯೋಗವು ದಿನಾಂಕ ನಿಗದಿ ಪಡಿಸಿದೆ.
ಈ ಸಂಬಂಧ ಕರ್ನಾಟಕ ಚುನಾವಣಾ ಆಯೋಗವು ಆದೇಶ ಮಾಡಿದ್ದು, ನವೆಂಬರ್.11, 2025ರಂದು ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತಏಣಿಕೆಗೆ ದಿನಾಂಕ ನಿಗದಿ ಪಡಿಸಿದೆ. ಈ ಮೂಲದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಕೋಲಾರ ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ಚುನಾವಣಾ ಆಯೋಗವು ಸೂಚಿಸಿದೆ.
ಅಂದಹಾಗೇ ಮಾಲೂರು ವಿಧಾನಸಭಾ ಚುನಾವಣೆಯ ಮರು ಮತಏಣಿಕೆಗೆ ಆಗ್ರಹಿಸಿ ಪರಾಜಿತ ಅಭ್ಯರ್ಥಿ ಮಂಜುನಾಥ್ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ತಹಶೀಲ್ದಾರ್ ಅಕ್ರಮದ ಬಗ್ಗೆ ಧ್ವನಿ ಎತ್ತಿದ್ದರು. ಆ ಬಳಿಕ ಕೋರ್ಟ್ ಮರು ಮತಏಣಿಕೆಗೆ ಆದೇಶಿಸಿತ್ತು. ಇದೀಗ ಅದರಂತೆ ನವೆಂಬರ್ 11ರಂದು ಮರು ಮತ ಏಣಿಕೆ ನಡೆಯಲಿದೆ.
BIG NEWS: ‘RFO ಹುದ್ದೆ’ಗಳಿಗೆ ಅರ್ಧ ಬಡ್ತಿ, ಅರ್ಧ ನೇರ ನೇಮಕಾತಿ: ಸಚಿವ ಈಶ್ವರ ಖಂಡ್ರೆ ಘೋಷಣೆ








