ಬೆಂಗಳೂರು: ಕೊಲೆಯಾದ ಮಗನ ಹುಟ್ಟಿದ ಹಬ್ಬದ ದಿನವೇ ಅಪರಾಧಿಗೆಳಿಗೆ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಹೀಗಾಗಿ ಮನೆಗೆ ದೀಪಾಲಂಕಾರ ಮಾಡಿ 7 ವರ್ಷದ ಬಳಿಕ ವಿಜೃಂಭಣೆಯಿಂದ ತಂದೆಯೊಬ್ಬರು ದೀಪಾವಳಿ ಹಬ್ಬವನ್ನು ಆಚಿಸಿದ್ದಾರೆ.
ಬಿಹಾರದ ಪಾಟ್ನಾದ ಸಿದ್ಧಾರ್ಥ್ ಕೌಶಲ್ ಎಂಬಾತ ಬೆಂಗಳೂರಿಗೆ ಎಂಜಿನಿಯರಿಂಗ್ ಮುಗಿಸಿದ ಬಳಿಕ ಕೆಲಸಕ್ಕೆ ಬಂದಿದ್ದರು. ಜೂನ್.26, 2018ರಂದು ಬೆಳಗಿನ ಜಾವ 2.45ರ ಸುಮಾರಿಗೆ ಕಾರಿನಲ್ಲಿ ಎಲೆಕ್ಟ್ರಾನಿಕ್ ಸಿಟಿ ಕಡೆ ಸಿದ್ದಾರ್ಥ್ ಕೌಶಲ್ ತೆರಳುತ್ತಿದ್ದಾಗ, ಮೈಕೋಲೇಔಟ್ ಬಳಿಯಲ್ಲಿ ಕಾರು ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡೋದಕ್ಕೆ ತೆರಳಿದ್ದರು.
ಈ ಸಮಯದಲ್ಲೇ ಬೈಕ್ ನಲ್ಲಿ ಬಂದಂತ ಇಬ್ಬರು, ಸಿದ್ಧಾರ್ಥ್ ಕಾರಿನ ಮಿರರ್ ಗೆ ಬೈಕ್ ತಾಗಿಸಿ ಕಿರಿಕ್ ಮಾಡಿದ್ದಾರೆ. ನೋಡಿಕೊಂಡು ಹೋಗಿ ಅಂದಿದ್ದೇ ತಡ ಸಿದ್ಧಾರ್ಥ್ ಹಾಗೂ ಇತರರ ವಿರುದ್ಧ ಜಗಳ ಉಂಟಾಗಿದೆ. ಜಗಳ ತಾರಕಕ್ಕೇರಿದ ವೇಳೆಯಲ್ಲಿ ಸಿದ್ಧಾರ್ಥ್ ತಲೆಗೆ ದೊಡ್ಡೆಯಿಂದ ಹೊಡೆದು ಪರಾರಿಯಾಗಿದ್ದರು. ತೀವ್ರ ರಕ್ತಸ್ತ್ರಾವಕ್ಕೆ ಒಳಗಾಗಿದ್ದಂತ ಸಿದ್ಧಾರ್ಥ್, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದನು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಂತ ಮೈಕೋಲೇಔಟ್ ಠಾಣೆಯ ಪೊಲೀಸರು ತನಿಖೆ ನಡೆಸಿ, ಆರೋಪಿಗಳಾದಂತ ಗಿರೀಶ್(21) ಹಾಗೂ ಮಹೇಶ್(19) ಎಂಬಾತನನ್ನು ಬಂಧಿಸಿದ್ದರು. ಇಬ್ಬರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ, ಸೂಕ್ತ ಸಾಕ್ಷಿಗಳನ್ನು 59ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದಂತ 59ನೇ ಸಿಸಿಹೆಚ್ ಕೋರ್ಟ್ ನ ನ್ಯಾಯಮೂರ್ತಿ ಬಾಲಚಂದ್ರ ಎನ್ ಭಟ್ ಅವರು, ಇಬ್ಬರು ಆರೋಪಿಗಳಿಗೆ 10,000 ದಂಡ ಹಾಗೂ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಆದೇಶ ಪ್ರಕಟಿಸಿದ್ದಾರೆ. ಆ ಮೂಲಕ ಸಿದ್ಧಾರ್ಥ್ ಕೌಶಿಕ್ ಹುಟ್ಟಿದ ಹಬ್ದದ ದಿನವೇ ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದ್ದಾರೆ.
BREAKING: ಶಾಲೆಯಲ್ಲಿ ಪ್ರಾರ್ಥನೆ ವೇಳೆ ನೂಕಾಟ ತಳ್ಳಾಟ: 4ನೇ ತರಗತಿ ಬಾಲಕಿ ಕಾಲು ಮುರಿತ
BREAKING: ಹಿಂದೂಜಾ ಗ್ರೂಪ್ ಅಧ್ಯಕ್ಷ ಗೋಪಿಚಂದ್ ಪಿ ಹಿಂದೂಜಾ ವಿಧಿವಶ | Gopichand P Hinduja No More








