ಬೆಂಗಳೂರು : ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಫೈರಿಂಗ್ ಮಾಡಿದ್ದ ನಾಲ್ವರು ಆರೋಪಿಗಳನ್ನು ಇದೀಗ ನೆಲಮಂಗಲ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ನಗರದಲ್ಲಿ ಸಿನಿಮಾ ಸ್ಟೈಲ್ ನಲ್ಲಿ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಸಲೀಂ ಕೊಲೆಗೆ ನಟೋರಿಯಸ್ ಗಳು ಬಿಗ್ ಸ್ಕೆಚ್ ಹಾಕಿದ್ದರು.ಮುಬಾರಕ್ ಶಾಧಿಕ್ ಹಾಗೂ ಆಸಿಫ್ ನರಸಿಂಹ ಬಂಧಿತ ಆರೋಪಿಗಳಾಗಿದ್ದು, ಇಬ್ಬರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇಸ್ಲಾಂಪುರದಲ್ಲಿ ಸಲೀಂ ಮೇಲೆ ಬಂಧಿತರು ಫೈರಿಂಗ್ ನಡೆಸಿದ್ದರು.
		







