ಬೆಂಗಳೂರು: ಎಸ್ಸಿ, ಎಸ್ಟಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವ ನಿಟ್ಟಿನಲ್ಲಿ ಪಂಚಶೀಲ ವೆಲ್ಫೇರ್ ಅಸೋಸಿಯೇಷನ್ ಹಾಗೂ ಸಿದ್ಧಾರ್ಥ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಘ ಮಹತ್ವದ ಹೆಜ್ಜೆಯನ್ನು ಇರಿಸಿದೆ. ಅದೇ 75 ದಿನಗಳ ಕಾಲ ಎಸ್ಸಿ, ಎಸ್ಟಿ ಸಮುದಾಯದ ಅಭ್ಯರ್ಥಿಗಳಿಗೆ ಉಚಿತವಾಗಿ ಸ್ಪರ್ಧಾತ್ಮಕ ತರಬೇತಿಯನ್ನು ನೀಡುವ ಕಾರ್ಯಾಗಾರವನ್ನು ಪಂಚಶೀಲ ವೆಲ್ಫೇರ್ ಅಸೋಸಿಯೇಷನ್ ನ ಮುಖ್ಯಸ್ಥರು, ಲೇಖಲ ಡಿಎಸ್ ವೀರಯ್ಯ ಅವರು ಉದ್ಘಾಟಿಸಿದರು.
ಇಂದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವಂತ ಪಂಚಶೀಲ ಗ್ರೂಪ್ ಆಫ್ ಇನ್ ಸ್ಟಿಟ್ಯೂಷನ್ ನ ಸೆಮಿನಾರ್ ಹಾಲ್ ನಲ್ಲಿ ಉಚಿತ ಸ್ಪರ್ಧಾತ್ಮಕ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದಂತ ಅವರು, ಈ ಸ್ಪರ್ಧಾತ್ಮಕ ಯುಗದಲ್ಲಿ ಎಸ್ಸಿ, ಎಸ್ಟಿ ವಿದ್ಯಾರ್ಥಿಗಳನ್ನು ತಯಾರಿ ಮಾಡುವುದೇ ನಮ್ಮ ಉದ್ದೇಶವಾಗಿದೆ. ಅಭ್ಯರ್ಥಿಗಳಲ್ಲಿ ನಾನು ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸಿ ಸರ್ಕಾರಿ ನೌಕರಿ ಪಡೆಯುತ್ತೇನೆ ಎನ್ನುವಂತ ವಿಶ್ವಾಸವನ್ನು ಹುಟ್ಟಿಸುವ ಕೆಲಸವನ್ನು ಈ ತರಬೇತಿಯ ಮೂಲಕ ಮಾಡಲಾಗುತ್ತದೆ ಎಂದರು.
ಪಂಚಶೀಲ ವೆಲ್ಫೇರ್ ಅಸೋಸಿಯೇಷನ್ ಮತ್ತು ಸಿದ್ಧಾರ್ಥ ಶಿಕ್ಷಣ ಮತ್ತು ಸಾಂಸ್ಕೃತಿಕ ಸಂಘದ ಮೂಲಕ ಈ ಕಾರ್ಯವನ್ನು ಮಾಡಲಾಗುತ್ತಿದೆ. ಇದು 75 ದಿನಗಳ ತರಬೇತಿಯಾಗಿದೆ. ಉಚಿತವಾಗಿ ನೀಡಲಾಗುತ್ತದೆ. ಉನ್ನತ ಸಾಧನೆಯನ್ನು ಮಾಡಿದಂತ ಸಾಧಕರಿಂದ ತರಬೇತಿಯನ್ನು ಕೊಡಿಸಲಾಗುತ್ತದೆ. ಪದವಿ, ಪಿಯುಸಿ ಉತ್ತೀರ್ಣರಾಗಿ ಸ್ಪರ್ಧಾತ್ಮಕ ತರಬೇತಿಗೆ ಅಣಿಯಾಗುವಂತ ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಈ ತರಬೇತಿಯನ್ನು ಆಯೋಜಿಸಲಾಗಿದೆ ಎಂದರು.
ಅಂದಹಾಗೇ 30 ಅಭ್ಯರ್ಥಿಗಳು ಉಚಿತ ಸ್ಪರ್ಧಾತ್ಮಕ ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ಉನ್ನತ ಸಾಧನೆ ಮಾಡಿದಂತ ಸಾಧಕರಿಂದ ತರಬೇತಿಯನ್ನು ಕೊಡಿಸಲಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ, ಉತ್ತೀರ್ಣರಾಗಿ ಹೇಗೆ ಸರ್ಕಾರಿ ಉದ್ಯೋಗ ಪಡೆಯುವುದು ಎನ್ನುವ ಬಗ್ಗೆ ಕಾರ್ಯಾಗಾರದಲ್ಲಿ ಪಾಲ್ಗೊಂಡವರಿಗೆ ತಿಳಿಸಿಕೊಡಲಾಗುತ್ತದೆ.
ಇಂದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಯಲಕ್ಷ್ಮೀ ಆರ್, ಐಪಿಎಸ್ ಅಧಿಕಾರಿ ಸುಭಾಷ್ ಭರಣಿ ಅವರ ಪತ್ನಿ ಮೋಹನ ಸುಭಾಷ್ ಭರಣಿ, ಸುಗುಣ ರಾವ್, ಜಿ.ಮಣಿವಾಚಗಂ ಭಾಗವಹಿಸಿದ್ದರು.
ಈ ವೇಳೆ ಪಂಚಶೀಲ ವೆಲ್ಫೇರ್ ಅಸೋಸಿಯೇಷನ್ ನ ಸಿಎಓ ಗೀತಾಂಜಲಿ, ಸಿಬ್ಬಂದಿಗಳಾದಂತ ಕೃಷ್ಣಮೂರ್ತಿ, ರಾಮಗೋಪಾಲ್, ಶಂಬೇಗೌಡ, ಕೃತಿಕಾ, ಎಲ್ ಎನ್ ಆರ್ ಕಾಲೇಜಿನ ವಿದ್ಯಾರ್ಥಿಗಳು, ಪಂಚಶೀಲ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳು ಸೇರಿದಂತೆ ಇತತರು ಉಪಸ್ಥಿತರಿದ್ದರು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ಇನ್ಮುಂದೆ ಪ್ರತೀ ವರ್ಷ ಸಿನಿಮಾ ಪ್ರಶಸ್ತಿಗಳನ್ನು ನೀಡಲಾಗುವುದು: ಸಿಎಂ ಸಿದ್ದರಾಮಯ್ಯ ಘೋಷಣೆ
ಶಿವಮೊಗ್ಗ: ಸೊರಬದ ‘ಕಾನಹಳ್ಳಿ’ಯಲ್ಲಿ ಅದ್ಧೂರಿಯಾಗಿ ‘ಕನ್ನಡ ರಾಜ್ಯೋತ್ಸವ’ ಆಚರಣೆ








