ಹಾಸನ: ಜಿಲ್ಲೆಯಲ್ಲಿ ಕುಡಿಯೋದು ಬಿಡು ಎಂಬುದಾಗಿ ಬುದ್ಧಿ ಹೇಳಿದ್ದಕ್ಕೆ ಭೀಕರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ರಾಂಪುರದಲ್ಲಿ ಕುಡಿಯೋದು ಬಿಡು ಎಂಬುದಾಗಿ ಬುದ್ಧಿ ಹೇಳಿದ್ದಕ್ಕೆ ಸ್ನೇಹಿತನನ್ನೇ ದುರುಳರು ಕೊಲೆ ಮಾಡಿದ್ದಾರೆ.
ಕಲ್ಲಿನಿಂದ ಹೊಡೆದು ಗಿರೀಶ್(44) ಎಂಬಾತನನ್ನು ರಮೇಶ್ ಎಂಬಾತ ಹತ್ಯೆ ಮಾಡಿದ್ದಾನೆ. ನಿನ್ನೆ ಕೆಲಸ ಮುಗಿಸಿ ಅಂಗಡಿ ಬಳಿಯಲ್ಲಿ ಗಿರೀಶ್ ಕುಳಿತಿದ್ದನು. ಮದ್ಯ ಸೇವಿಸಿ ಗಿರೀಶ್ ಬಳಿಗೆ ಆರೋಪಿ ರಮೇಶ್ ಬಂದಿದ್ದನು.
ಈ ಸಂದರ್ಭದಲ್ಲಿ ಕುಡಿಯಬೇಡ ಎಂಬುದಾಗಿ ರಮೇಶ್ ಗೆ ಬುದ್ಧಿವಾದವನ್ನು ಗಿರೀಶ್ ಹೇಳಿದ್ದನು. ಇದರಿಂದ ಸಿಟ್ಟಾದಂತ ರಮೇಶ್, ಗಿರೀಶ್ ಗೆ ಸಿಟ್ಟಿನಿಂದ ಕಲ್ಲಿನಿಂದ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ರಮೇಶ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಡವರ ಚೇನಂಡ ಹಾಕಿ ಪಂದ್ಯಾವಳಿಗೆ ಸರ್ಕಾರದಿಂದ 1 ಕೋಟಿ ಅನುದಾನ: ಸಿಎಂ ಸಿದ್ದರಾಮಯ್ಯ ಘೋಷಣೆ
ರಾಜ್ಯದ ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ನ.19 ರಂದು `ಅಕ್ಕ ಪಡೆ’ಗೆ ಚಾಲನೆ.!








