ಬೆಂಗಳೂರು: ಟೈಂಪಾಸ್ ಬೇಡ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ ವಿಚ್ಛೇದಿತ ಮಹಿಳೆಯನ್ನು 8 ಬಾರಿ ಚಾಕುವಿನಿಂದ ಇರಿದು ಪ್ರಿಯಕರ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯಲ್ಲಿ ನಡೆದಿದೆ.
ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪಿಳ್ಳಣ್ಣ ಗಾರ್ಡನ್ ನಲ್ಲಿ ಅ. 31ರಂದು ರಾತ್ರಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೇಣುಕಾ ಅವರನ್ನು ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಕೊಲೆ ಮಾಡಿದ್ದಾನೆ.
ಮದುವೆಯಾಗಿ ಪತಿಯಿಂದ ದೂರವಾಗಿದ್ದ ಮೃತ ರೇಣುಕಾ ಅದೇ ಏರಿಯಾದ ಅಂಬೇಡ್ಕರ್ ಅಲಿಯಾಸ್ ಕುಟ್ಟಿ ಜೊತೆಗೆ ಲವ್ ಅಲ್ಲಿ ಇದ್ದರು. ಮದುವೆಯಾಗಿ ಪತ್ನಿಯ ಜೊತೆಗೆ ವಾಸವಾಗಿದ್ದ ಅಂಬೇಡ್ಕರ್ ಅಲಿಯಾಸ್ ಕುಟ್ಟಿಗೆ ಟೈಂಪಾಸ್ ಲವ್ ಬೇಡ, ನನ್ನನ್ನು ಮದುವೆಯಾಗು ಎಂದು ಪಟ್ಟು ಹಿಡಿದಿದ್ದಳು.
ಇದರಿಂದ ಕುಟ್ಟಿ ರೊಚ್ಚಿಗೆದ್ದಿದ್ದ. ಘಟನೆಯಾದ ದಿನ ರೇಣುಕಾ ಕೆಲಸ ಮುಗಿಸಿ ಮನೆಗೆ ವಾಪಸ್ಸಾಗುತ್ತಿದ್ದಳು. ಈ ವೇಳೆ ಕುಟ್ಟಿ ರೇಣುಕಾಳನ್ನು ತಡೆದು, ನಿನ್ನ ಜೊತೆ ಮಾತಾಡಬೇಕು ಬಾ ಎಂದು ಪಿಳ್ಳಣ್ಣ ಗಾರ್ಡನ್‌ನ ಸರ್ಕಾರಿ ಶಾಲೆಯ ಬಳಿ ಕರೆದುಕೊಂಡು ಹೋಗಿದ್ದ. ಅಲ್ಲಿ 8 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿ, ಪರಾರಿಯಾಗಿದ್ದಾನೆ. ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೆ.ಜಿ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.








