ದಕ್ಷಿಣಕನ್ನಡ : ಅಂಬುಲೆನ್ಸ್ ಗೆ ದಾರಿ ಬಿಡದೆ ಪುಂಡಾಟ ಮೆರೆದಿದ್ದ ಬೈಕ್ ಸವಾರನನ್ನು ಪೊಲೀಸರು ಇದೀಗ ಅರೆಸ್ಟ್ ಮಾಡಿದ್ದಾರೆ. ಬೆಟ್ಟಂಪಾಡಿ ಗ್ರಾಮದಲ್ಲಿ ಮೊಹಮ್ಮದ್ ಮನ್ಸೂರ್ (38) ಇದೀಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಟ್ಟಂಪಾಡಿ ಗ್ರಾಮದ ನಿವಾಸಿಯಾಗಿರುವ ಮಹಮ್ಮದ್ KA22 C 1382 ಸಗೆಯ ದ್ವಿಚಕ್ರ ವಾಹನ ಸಹ ಜಪ್ತಿ ಮಾಡಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ನಿನ್ನೆ ಬಿಸಿಲೆ ಘಾಟ್ ಬಳಿ ಅಪಘಾತ ನಡೆದಿತ್ತು. ಗಯಾಳುಗಳನ್ನು ಆಂಬುಲೆನ್ಸ್ ಚಾಲಕ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ.
ಈ ವೇಳೆ ದಾರಿ ಬಿಡದೆ ಬೈಕ್ ಸವಾರ ಪುಂಡಾಟ ಮೆರೆದಿದ್ದ. ಮೂರ್ನಾಲ್ಕು ಕಿಲೋಮೀಟರ್ ವರೆಗೂ ದಾರಿ ಬಿಡದೆ ಮೊಹಮ್ಮದ್ ಪುಂಡಾಟ ಮೆರೆದಿದ್ದಾನೆ. ಬಂಟ್ವಾಳ ತಾಲೂಕಿನ ಬಿಸಿ ರೋಡ್ ಬಳಿ ಈ ಒಂದು ಘಟನೆ ನಡೆದಿತ್ತು ವಿಡಿಯೋ ಮಾಡಿ ಆಂಬುಲೆನ್ಸ್ ಗೆ ಸಿಬ್ಬಂದಿ ವೈರಲ್ ಮಾಡಿದ್ದರು.
 
		



 




