ಬೆಂಗಳೂರು : ನಮ್ಮ ಮೆಟ್ರೊದಲ್ಲಿ ಮೂರನೇ ಬಾರಿ ಅಂಗಾಂಗ ರವಾನಿಸಲಾಗಿದ್ದು, ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಿಂದ ಗೊರಗುಂಟೆಪಾಳ್ಯ ಮೆಟ್ರೊ ನಿಲ್ದಾಣದ ಮೂಲಕ ಬೊಮ್ಮಸಂದ್ರದ ನಾರಾಯಣ ಹೆಲ್ತ್ ಸಿಟಿಗೆ ಸಾಗಾಟ ಮಾಡಲಾಯಿತು.
ಅತಿಯಾದ ಒತ್ತಡದಿಂದ ಮಿದುಳಿನಲ್ಲಿ ರಕ್ತಸ್ರಾವ ಉಂಟಾಗಿ ಮಿದುಳು ನಿಷ್ಕ್ರಿಯಗೊಂಡ 33 ವರ್ಷದ ಯುವಕನಿಂದ ಪಡೆದ ಅಂಗಾಂಗವನ್ನು ‘ನಮ್ಮ ಮೆಟ್ರೊ’ ರೈಲಿನಲ್ಲಿ ರವಾನಿಸುವ ಮೂಲಕ ನಾಲ್ವರು ರೋಗಿಗಳಿಗೆ ಯಶಸ್ವಿಯಾಗಿ ಕಸಿ ಶಸ್ತ್ರಚಿಕಿತ್ಸೆ ನಡೆಸಿ ಮರುಜೀವ ನೀಡಲಾಗಿದೆ.
ದಾನಿಯು ನಗರದ ಮತ್ತಿಕೆರೆ ನಿವಾಸಿಯಾಗದ್ದು, ಮನೆಯಲ್ಲಿ ಸ್ನಾನ ಮುಗಿಸಿ ಹೊರ ಬಂದವರೇ ತಲೆ ಸುತ್ತಿ ಪ್ರಜ್ಞೆ ತಪ್ಪಿ ಕೆಳಗೆ ಬಿದ್ದಿದ್ದರು. ಆರಂಭದಲ್ಲಿ ನಿಮ್ಹಾನ್ಸ್ ಗೆ ಸೇರಿಸಲಾಗಿತ್ತು. ಆನಂತರ ಸ್ಪರ್ಶ್ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಿಸದೆ ರೋಗಿ ಯ ಮಿದುಳು ನಿಷ್ಕ್ರಿಯಗೊಂಡಿದ್ದಾಗಿ ವೈದ್ಯರು ತಿಳಿ ಸಿದ ಬಳಿಕ ಕುಟುಂಬದವರು ಅಂಗಾಂಗ ದಾನಕ್ಕೆ ಸಮ್ಮ ಮೆಟ್ರೋದಲ್ಲಿ ಅಂಗಾಂಗ ಸಾಗಾಟ ಮಾಡಲಾಯಿತು.
61 ನಿಮಿಷಗಳಲ್ಲಿ ರವಾನೆ:
ಯಶವಂತಪುರದ ಸ್ಪರ್ಶ್ ಆಸ್ಪತ್ರೆಯಲ್ಲಿ ದಾನಿಯಿಂದ ಪಡೆದ ಅಂಗಾಂಗಗಳ ಪೈಕಿ ಶ್ವಾಸಕೋಶವನ್ನು ಗೊರಗುಂಟೆಪಾಳ್ಯ ಮೆಟ್ರೋ ನಿಲ್ದಾಣದಿಂದ, ಆರ್.ವಿ. ರಸ್ತೆಯ ನಿಲ್ದಾಣಕ್ಕೆ ಹಾಗೂ ಅಲ್ಲಿಂದ ಹಳದಿ ಮಾರ್ಗವಾಗಿ ಬೊಮ್ಮಸಂದ್ರ ನಿಲ್ದಾಣಕ್ಕೆ 61 ನಿಮಿಷಗಳಲ್ಲಿ (30-33ಕಿ.ಮೀ.) ನಾರಾಯಣ ಹೆಲ್ತ್ ಆಸ್ಪತ್ರೆಗೆ ತಲುಪಿಸಲಾಯಿತು. ಇದೇ ರೀತಿ, ಜೆ.ಪಿ.ನಗರದ ಆಸ್ಟರ್ ಆರ್.ವಿ. ಆಸ್ಪತ್ರೆಗೆ ಹೃದಯವನ್ನು ಸಹ ಮೆಟ್ರೋ ಮೂಲಕ ರವಾನಿಸಲಾಯಿತು.
ಉಳಿದಂತೆ ಯಶವಂತಪುರ ಸ್ಪರ್ಶ್ ಆಸ್ಪತ್ರೆಗೆ ಒಂದು ಕಿಡ್ನಿ, ವಿಕ್ಟೋರಿಯಾ ಆವರಣದಲ್ಲಿನ ನೆರೆ ಯುರಾಲಜಿ ಸಂಸ್ಥೆಗೆ ಮತ್ತೊಂದು ಕಿಡ್ನಿ ಹಾಗೂ ಮಿಂಟೋ ಕಣ್ಣಿನ ಆಸ್ಪತ್ರೆಗೆ ಎರಡು ಕಾರ್ನಿಯಾವನ್ನು ರಸ್ತೆ ಮೂಲಕ ರವಾನಿಸಿ, ಅಗತ್ಯವಿದ್ದ ರೋಗಿಗಳಿಗೆ ಕಸಿ ಶಸಚಿಕಿತ್ಸೆ ನಡೆಸಲಾಯಿತು. ಸಂಚಾರ ಸಿಕ್ಕಿನ ಸಮಯದಲ್ಲಿ ದಾನಿಯ ಪ್ರಮುಖ ಅಂಗವನ್ನು ಆಸ್ಪತ್ರೆಗೆ ತ್ವರಿತವಾಗಿ ಸಾಗಿಸಲು ಸಹಕರಿಸಿದ ಬೆಂಗಳೂರು ಮೆಟ್ರೋ ನಿಗಮದ ಸಹಕಾರಕ್ಕೆ ನಾರಾಯಣ ಹೆಲ್ತ್ ಆಸ್ಪತ್ರೆಯು ಧನ್ಯವಾದ ತಿಳಿಸಿದೆ.
ಗೊರುಗುಂಟೆಪಾಳ್ಯ ಸ್ಪರ್ಶ ಆಸ್ಪತ್ರೆಯಿಂದ, ಬೊಮ್ಮಸಂದ್ರದ ನಾರಾಯಣ ಹೃದಯಾಲಯಕ್ಕೆ ಕೇವಲ 1 ಗಂಟೆ 5 ನಿಮಿಷಗಳಲ್ಲಿ ಶ್ವಾಸಕೋಶದ ಜೋಡಿಯನ್ನು ತ್ವರಿತವಾಗಿ ಸಾಗಿಸಲು #BMRCL ಸಹಾಯ ಮಾಡಿತು. ಇದು ಹಸಿರು ಮತ್ತು ಹಳದಿ ಮಾರ್ಗಗಳ 31 ನಿಲ್ದಾಣಗಳನ್ನು ಒಳಗೊಂಡಿದೆ. pic.twitter.com/01nHENRMmU
— ನಮ್ಮ ಮೆಟ್ರೋ (@OfficialBMRCL) October 30, 2025
 
		



 




