ಬೆಂಗಳೂರು : ಬೆಂಗಳೂರಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಮಹದೇವಪುರದಲ್ಲಿ ಬಹುಮಡಿ ಕಟ್ಟಡ ದುರಸ್ತಿ ವೇಳೆ ಅವಘಡ ಸಂಭವಿಸಿದೆ. ಬಿಲ್ಡಿಂಗ್ ಅವಳವಡಿಸಿದ್ದ ಕಟ್ಟಿಗೆ ಮೇಲಿಂದ ಬಿದ್ದು ಓರ್ವ ಕೂಲಿ ಕಾರ್ಮಿಕ ಸಾವನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಡೆದಿದೆ.
ಬೆಂಗಳೂರಿನ ಮಹದೇವಪುರ ಮುಖ್ಯ ರಸ್ತೆಯಲ್ಲಿರುವ ಪೈ ಲೇಔಟ್ ನಲ್ಲಿ ಈ ಒಂದು ಅವಘಡ ಸಂಭವಿಸಿದೆ. ಹಾವೇರಿ ಮೂಲದ ಯೂಸುಫ್ (35) ಎನ್ನುವ ಕೂಲಿಕಾರ್ಮಿಕ ಮೃತಪಟ್ಟಿದ್ದಾನೆ. ಇನ್ನು ಮೂವರು ಕೂಲಿ ಕಾರ್ಮಿಕರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಟ್ಟಡದ ಮಾಲೀಕ ಮತ್ತು ಗುತ್ತಿಗೆದಾರನ ಮಾಹಿತಿಯನ್ನು ಪೊಲೀಸರು ಸಂಗ್ರಹಿಸುತ್ತಿದ್ದಾರೆ. ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








