ಬೆಂಗಳೂರು: KSHCOEA BMS ಸಂಘದ ಹೋರಾಟದ ಫಲ ಎನ್ನುವಂತೆ ಮೃತ ಪಟ್ಟಂತ NHM ಸಿಬ್ಬಂದಿ ಕುಟುಂಬಕ್ಕೆ ಸರ್ಕಾರದಿಂದ 10 ಲಕ್ಷ ವಿಮೆ ಚೆಕ್ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದೆ.
ಈ ಬಗ್ಗೆ ಸಂಘದಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಬಿಡುಗಡೆ ಮಾಡಿದ್ದು, ರಾಷ್ಟ್ರೀಯ ಆರೋಗ್ಯ ಅಭಿಯಾನದ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ KSHCOEA BMS ಸಂಘದ ಹೋರಾಟದ ಫಲವಾಗಿ ಗುಂಪು ವಿಮೆ ಯೋಜನೆಯನ್ನು AXIS BANK ಮೂಲಕ ಜಾರಿ ಮಾಡಲಾಗಿತ್ತು, ಅಪಘಾತ ವಿಮೆಗೆ 60 ಲಕ್ಷ ಹಾಗೂ ಸಹಜ ಸಾವಿಗೆ 10 ಲಕ್ಷ ವಿಮೆ ಯೋಜನೆ ರೂಪಿಸಲಾಗಿತ್ತು, ಈ ಯೋಜನೆಗೆ ಅಂದಿನ ಅಭಿಯಾನ ನಿರ್ದೇಶಕರಾದ ಡಾ. ನವೀನ್ ಭಟ್ ವೈ, IAS ಇವರು ವಿಶೇಷ ಮುತುವರ್ಜಿ ವಹಿಸಿ ಈ ಯೋಜನೆಯನ್ನು ಜಾರಿ ಗೊಳಿಸಿದ್ದರು ಎಂದಿದೆ.
ಯೋಜನೆ ಜಾರಿ ನಂತರದ ದಿನದಿಂದ ಈ ವರೆಗೂ ಒಟ್ಟು 10 ಸಿಬ್ಬಂದಿಗಳು ಮೃತಪಟ್ಟಿದ್ದು ಅದರಲ್ಲಿ ಮೊದಲ ಪ್ರಕರಣವಾದ ರಾಜೇಂದ್ರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಮೈಸೂರು ಜಿಲ್ಲೆ ಇಲ್ಲಿ ಕಿರಿಯ ಆರೋಗ್ಯ ನೀರಿಕ್ಷಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಪ್ರವೀಣ್ ಅವರ ಅಕಾಲಿಕ ಮರಣ ಹೊಂದಿದ್ದರು.
ಈ ಎಲ್ಲಾ ಪ್ರಕರಣಗಳ ಹಿನ್ನೆಲೆಯಲ್ಲಿ KSHCOEA BMS ಸಂಘವು ಸತತ ಪ್ರಯತ್ನದ ಮೂಲಕ ದಿನಾಂಕ:30.10.2025 ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯ, ಮೈಸೂರು ಇಲ್ಲಿ ಮಾನ್ಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾದ ಡಾ. ಕುಮಾರಸ್ವಾಮಿ ಪಿಸಿ, ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿಗಳಾದ ಡಾ.ಮಹಮ್ಮದ್ ಸಿರಾಜ್ ಅಹಮ್ಮದ್ ರವರ ಸಮಕ್ಷಮದಲ್ಲಿ ಹಾಗೂ ಆಕ್ಸಿಸ್ ಬ್ಯಾಂಕ್ ನ ವಲಯ ಅಧಿಕಾರಿಯಾದ ವಿಕಾಸ್ ಬಿ, ಆಕ್ಸಿಸ್ ಬ್ಯಾಂಕ್ ಶಾಖೆ ವ್ಯವಸ್ಥಾಪಕರಾದ ಸುಷ್ಮಾ ಡೇವಿಡ್ ಮತ್ತು ಆಕ್ಸಿಸ್ ಬ್ಯಾಂಕ್ ವ್ಯವಸ್ಥಾಪಕರಾದ ಕೈಸರ್ ಪಾಷ ರವರು ಮೃತ ಸಿಬ್ಬಂದಿಯ ತಾಯಿಯವರಾದ ಭಾಗ್ಯಮ್ಮ ಇವರಿಗೆ ರೂ. 10.00 ಲಕ್ಷದ ವಿಮಾ ಚಕ್ ಅನ್ನು ವಿತರಿಸಲಾಯಿತು. ಈ ಬಗ್ಗೆ ಮಾತನಾಡಿದ ತಾಯಿ ಭಾಗ್ಯಮ್ಮ ಸಚಿವರಿಗೆ, ಅಧಿಕಾರಿಗಳಿಗೆ ಮತ್ತು KSHCOEA BMS ಸಂಘಕ್ಕೆ ಕೃತಜ್ಞತೆ ತಿಳಿಸಿದೆ.
ಹೋರಾಟದ ಪ್ರತಿಫಲವಾಗಿ ವಿಮೆ ಮೊತ್ತವು ಕುಟುಂಬಕ್ಕೆ ದೊರೆತ್ತಿದ್ದು ದುಡಿಯುವ ಮಗನನ್ನು ಕಳೆದುಕೊಂಡು ಕುಟುಂಬಕ್ಕೆ ಆಸರೆಯಾಗಿದೆ ಈ ಯೋಜನೆ ನೀಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಅಧಿಕಾರಿಗಳಿಗೆ ಹಾಗೂ AXIS BANK ಮುಖ್ಯಸ್ಥರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದು KSHCOEA BMS ಸಂಘದ ಅಧ್ಯಕ್ಷರಾದ ಶ್ರೀಕಾಂತ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ, ಹಾಗೇ ಉಳಿದ ಪ್ರಕರಣಗಳಿಗೆ ಕೂಡಲೇ ಮಂಜೂರಾಗಲಿ ಎಂದು ಒತ್ತಾಯ ಮಾಡಿದ್ದಾರೆ.
BREAKING: CBSEಯಿಂದ 10, 12ನೇ ತರಗತಿಯ ಬೋರ್ಡ್ ಪರೀಕ್ಷೆಗಳ 2026ರ ಅಂತಿಮ ದಿನಾಂಕ ಬಿಡುಗಡೆ
BREAKING: ಭಾರತದ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಸೂರ್ಯಕಾಂತ್ ನೇಮಕ | Justice Surya Kant








