ವಿಜಯಪುರ : ಬಿಜೆಪಿ ಮುಖಂಡ ವಿಜುಗೌಡ ಪುತ್ರನಿಂದ ಟೋಲ್ ಸಿಬ್ಬಂದಿ ಮೇಲೆ ಹಲ್ಲೆ ನಡೆದಿದ್ದು ವಿಜಯಪುರ ಜಿಲ್ಲೆಯ ಕನ್ನೊಳ್ಳಿ ಟೋಲ್ ಬಳಿ ಈ ಒಂದು ಘಟನೆ ನಡೆದಿದೆ. ಬಿಜೆಪಿ ಮುಖಂಡ ವಿಜುಗೌಡ ಪಾಟೀಲ್ ಪುತ್ರ ಸಮರ್ಥ ಗೌಡನಿಂದ ಹಲ್ಲೆ ನಡೆದಿದ್ದು, ವಿಜಯಪುರದಿಂದ ಬ್ಲಾಕ್ ಕಲರ್ ಥಾರ್ ನಲ್ಲಿ ಆತ ಸಿಂದಗಿ ಕಡೆಗೆ ಹೊರಟಿದ್ದ.
ಹಣ ಕೇಳಿದ್ದಕ್ಕೆ ವಿಜುಗೌಡ ಪುತ್ರ ಅಂತ ಸಮರ್ಥ ಗೌಡ ಸಿಬ್ಬಂದಿಗಳಿಗೆ ಹೇಳಿದ್ದಾನೆ. ಯಾವ ವಿಜು ಗೌಡ ಅಂತ ಟೋಲ್ ಸಿಬ್ಬಂದಿ ಕೇಳಿದ್ದಕ್ಕೆ ಸಿಬ್ಬಂದಿ ಮೇಲೆ ಸಮರ್ಥ ಹಲ್ಲೆ ಮಾಡಿದ್ದಾನೆ ಎನ್ನುವ ಆರೋಪ ಕೇಳಿ ಬಂದಿದೆ. ಟೋಲ್ ಸಿಬ್ಬಂದಿ ಸಂಗಪ್ಪಗೆ ಸಮರ್ಥ ಗೌಡ ಹಾಗೂ ಗೆಳೆಯರು ಹಲ್ಲೆ ಮಾಡಿದ್ದಾರೆ.
ಸಮರ್ಥ್ ಗೌಡ ಹಾಗೂ ಗೆಳೆಯರಿಂದ ಉಳಿದ ಸಿಬ್ಬಂದಿಗಳು ಸಂಗಪ್ಪನನ್ನು ರಕ್ಷಣೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ಸಂಗಪ್ಪ ಸಿಂದಗಿ ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾನೆ. ಸಮರ್ಥ್ ಗೌಡ ವಿರುದ್ಧ ಸಿಬ್ಬಂದಿಗಳು ದೂರು ದಾಖಲಿಸಲು ಪೊಲೀಸ್ ಠಾಣೆಗೆ ತೆರಳಿದ್ದಾರೆ. ಸಿಂದಗಿ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಒಂದು ಪ್ರಕರಣ ನಡೆದಿದೆ.








