ಬೆಂಗಳೂರು : ಬೆಂಗಳೂರಿನಲ್ಲಿ ಮತ್ತೊಂದು ಭೀಕರವಾದ ಕೊಲೆಯಾಗಿದ್ದು, ಬರ್ತಡೇ ಪಾರ್ಟಿ ಬಿಲ್ ವಿಚಾರಕ್ಕೆ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಸ್ನೇಹಿತರಿಂದಲೇ ಬರ್ತಡೇ ಬಾಯ್ ಸಂದೀಪ್ (23) ಎನ್ನುವ ಯುವಕನನ್ನು ಸ್ನೇಹಿತರೆ ಕೊಲೆ ಮಾಡಿದ್ದಾರೆ. ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಹಾರಗದ್ದೆ ವಡ್ಡರ ಪಾಳ್ಯದಲ್ಲಿ ಈ ಒಂದು ಕೊಲೆ ನಡೆದಿದೆ.
ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಹಾರಗದ್ದೆ ವಡ್ರ ಪಾಳ್ಯದಲ್ಲಿ ಸ್ನೇಹಿತರಾದ ಸಂತೋಷ್ ಮತ್ತು ಸಾಗರ್ ನಿಂದ ಸಂದೀಪ್ ಕೊಲೆ ಆಗಿದೆ. ಅಕ್ಟೋಬರ್ 16ರಂದು ಸಂದೀಪನ ಬರ್ತಡೇ ಇತ್ತು ಪಾರ್ಟಿಗೆ ಎಂದು ಸಂದೀಪ್ ಸ್ನೇಹಿತರನ್ನು ಬಾರ್ ಗೆ ಕರೆದುಕೊಂಡು ಹೋಗಿದ್ದ. ಪಾರ್ಟಿ ಮುಗಿದ ಬಳಿಕ ಸಂದೀಪ್ ಮೊದಲು ಬಿಲ್ ಕಟ್ಟಿದ್ದಾನೆ. ಎರಡನೇ ಸಲ ಬಿಲ್ ಕಟ್ಟುವಂತೆ ಸ್ನೇಹಿತರು ಸಂದೀಪ್ ಗೆ ಒತ್ತಾಯಿಸಿದ್ದಾರೆ. ನನ್ನ ಹತ್ತಿರ ಹಣ ಇಲ್ಲ ಎಂದಿದ್ದಕ್ಕೆ ಸಂತೋಷ ಬಾರ್ ಬಳಿ ಗಲಾಟೆ ಮಾಡಿದ್ದಾನೆ.
ಇದರಿಂದ ಬೇಸರಗೊಂಡು ಸಂದೀಪ್ ವಾಪಸ್ ಊರಿಗೆ ಬಂದಿದ್ದಾನೆ. ಅಷ್ಟಕ್ಕೆ ಸುಮ್ಮನಾಗದೆ ವಾಲಿಬಾಲ್ ಕೋರ್ಟ್ ಬಳಿ ಕರೆಸಿ ಸಂದೀಪ್ ಮೇಲೆ ಹಲ್ಲೆ ಮಾಡಿದ್ದಾರೆ. ಸಂತೋಷ್ ಮತ್ತು ಸಾಗರ್ ಸಂದೀಪನ ಮೇಲೆ ಭೀಕರವಾಗಿ ಹಲ್ಲೆ ಮಾಡಿದ್ದಾರೆ, ಹಲ್ಲೆ ಸಂದರ್ಭದಲ್ಲಿ ಸಂದೀಪ್ ತಲೆಗೆ ಗಂಭೀರವಾದ ಗಾಯವಾಗಿತ್ತು. ಘಟನೆ ನಡೆದ ಮೂರು ದಿನದ ನಂತರ ಸಂದೀಪ ಬ್ರೈನ್ ನಲ್ಲಿ ಬ್ಲಡ್ ಕ್ಲಾಟ್ ಆಗಿದೆ.
ಅನಂತರ ಸಂದೀಪ್ ನನ್ನು ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ಸಂದೀಪ್ ಕೆಲ ದಿನಗಳಿಂದ ಕೋಮ ಸ್ಥಿತಿಯಲ್ಲಿದ್ದ ಎರಡು ದಿನಗಳು ಹಿಂದೆ ಚಿಕಿತ್ಸೆ ಫಲಕಾರಿಯಾಗಿದೆ ಸಂದೀಪ್ ಮೃತಪಟ್ಟಿದ್ದಾನೆ ಆರೋಪಿಗಳಾದ ಸಂತೋಷ ಮತ್ತು ಸಾಗರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಬ್ಬರನ್ನು ರೆಸ್ಟ್ ಮಾಡಿ ಜಿಗಣಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.








