ಬೆಂಗಳೂರು : ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ಎಲ್ಲಾ ಅನಧಿಕೃತ ಪೇಯಿಂಗ್ ಗೆಸ್ಟ್(PG)/ ವಸತಿ ಗೃಹಗಳ ಉದ್ದಿಮೆದಾರರಿಗೆ ಅಂತಿಮ ಎಚ್ಚರಿಕೆಯಾಗಿದೆ.
ಬೆಂಗಳೂರು ಪೂರ್ವ ನಗರಪಾಲಿಕೆಯ ವ್ಯಾಪ್ತಿಯಲ್ಲಿ ಅನೇಕ PG ಗಳು ಉದ್ದಿಮೆ ಪರವಾನಗಿ ಪಡೆಯದೆ ಹಾಗೂ ಸ್ಥಾಪಿತ ಮಾನದಂಡಗಳನ್ನು ಉಲ್ಲಂಘಿಸಿ ವಾಹಿವಾಟು ಮಾಡುತ್ತಿರುವ ದೂರು ಬಂದಿರುತ್ತದೆ. ಪ್ರದೇಶದ ಪ್ರಮುಖ ಉಲ್ಲಂಘನೆಗಳಲ್ಲಿ:-
* ವಸತಿ ವಲಯಗಳಲ್ಲಿ ಅನುಮತಿಯಿಲ್ಲದೆ ವಾಹಿವಾಟು ಮಾಡುತ್ತಿರುವುದು.
* ಮೂಲಭೂತ ಸುರಕ್ಷತೆ ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಒದಗಿಸದೇ ಇರುವುದು.
* ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸದಿರುವುದು
* ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸದಿರುವುದು, ಇತ್ಯಾದಿ.
ಈ ಅನಧಿಕೃತ ಪೇಯಿಂಗ್ ಗೆಸ್ಟ್(PG)/ ವಸತಿ ಗೃಹಗಳು ಅಗತ್ಯ ಸುರಕ್ಷತಾ ಕ್ರಮಗಳನ್ನು ಹೊಂದಿಲ್ಲದೇ ಸಾರ್ವಜನಿಕ ಆರೋಗ್ಯಕ್ಕೆ, ರಕ್ಷಣೆಗಳಿಗೆ ಅಪಾಯಕ್ಕೆ ಕಾರಣವಾಗುವ ಹಿನ್ನಲೆಯಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ವ್ಯಾಪ್ತಿಯಲ್ಲಿ ಅಂತಹ ಅನಧಿಕೃತ PG ವಸತಿಗೃಹಗಳನ್ನು ನಿಯಂತ್ರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಈ ಸಾರ್ವಜನಿಕ ಪ್ರಕಟಣೆ ಹೊರಡಿಸಿದ 07 ದಿನಗಳಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ (ಬಿಇಸಿಸಿ) ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಗಿ ಇಲ್ಲದೆ ವಾಹಿವಾಟು ಮಾಡುತ್ತಿರುವ PG ಮಾಲೀಕರಿಗೆ ದಂಡ ವಿಧಿಸಿ ಉದ್ದಿಮೆಗೆ ಬೀಗ ಮುದ್ರೆ ಹಾಕಲಾಗುವುದು ಎಂದು ತಿಳಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ 2024ರ ಮಾರ್ಗಸೂಚಿಗಳನ್ನು ಪಾಲಿಸದ ಮತ್ತು ಅಗತ್ಯ ಪರವಾನಗಿಗಳನ್ನು ಪಡೆಯದೇ ಇರುವ ಪೇಯಿಂಗ್ ಗೆಸ್ಟ್ (PG)/ ವಸತಿ ಗೃಹಗಳಿಗೆ, ಬೆಂಗಳೂರು ಗೌವರ್‌ನನ್ಸ್ ಕಾಯ್ದೆ 2024ರ ರೀತ್ಯಾ ಕಾನೂನು ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಭಿವೃದ್ಧಿ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ರವರು ಸಾರ್ವಜನಿಕ ಪ್ರಕಟಣೆ ಮೂಲಕ ತಿಳಿಸಿರುತ್ತಾರೆ.
BREAKING: ತೆರಿಗೆ ಪಾವತಿದಾರರಿಗೆ ಬಿಗ್ ರಿಲೀಫ್: ಡಿ.10ರವರೆಗೆ ITR ಸಲ್ಲಿಕೆ ಗಡುವು ವಿಸ್ತರಣೆ | ITR Filing
‘ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ’ಯಿಂದಾಗಿ ಪರಿಸರ, ಜೀವ ವೈವಿಧ್ಯತೆ ನಾಶ: ರೈತ ಮುಖಂಡ ದಿನೇಶ್ ಶಿರವಾಳ








