ಬೆಂಗಳೂರು : ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ಮಾಡಿದ್ದು, 17 ಮಂದಿ ಡಿವೈಎಸ್ ಪಿ (ಸಿವಿಲ್) ಹಾಗೂ ಪಿಐ (ಸಿವಿಲ್)ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಸರ್ಕಾರದ ಅಧಿಸೂಚನೆ ಸಂಖ್ಯೆ: ಒಇ 359 (i) ಪಿಇಜಿ 2025, ದಿನಾಂಕ: 13.10.2025ರಲ್ಲಿ ಈ ಕೆಳಕಂಡ ಪಿಐ (ಸಿವಿಲ್) (ಉಳಿಕೆ ಮೂಲವೃಂದ) ವೃಂದದ ಅಧಿಕಾರಿಗಳಿಗೆ ವೇತನ ಶ್ರೇಣಿ ರೂ.83,700-1,55,200ರ ಡಿವೈಎಸ್‌ಪಿ (ಸಿವಿಲ್) (ಉಳಿಕೆ ಮೂಲವೃಂದ) ವೃಂದದಲ್ಲಿ ಕೆಸಿಎಸ್ ನಿಯಮ 32 ರಡಿ ಸ್ವತಂತ್ರ ಪ್ರಭಾರದಲ್ಲಿರಿಸಿದ್ದು, ಈ ಕೆಳಕಂಡಂತೆ ಅವರುಗಳ ಹೆಸರಿನ ಮುಂದೆ ನಮೂದಿಸಿರುವ ಸ್ಥಳಗಳಿಗೆ ಈ ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದೆ.









