ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಸಂಸದ ಡಿಕೆ ಸುರೇಶ್ ಅವರು ಪ್ರತಿಕ್ರಿಯೆ ನೀಡಿದ್ದು, ಅಣ್ಣನನ್ನ ಮುಖ್ಯಮಂತ್ರಿ ಮಾಡಬೇಕೆಂಬ ಆಸೆ ನನಗೂ ಇದೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ರಾಜ್ಯಕ್ಕೆ ಆಗಮಿಸುವ ಕುರಿತು, ಅಣ್ಣನನ್ನು ಮುಖ್ಯಮಂತ್ರಿ ಮಾಡಬೇಕೆಂಬ ಆಸೆ ನನಗೂ ಇದೆ. ಅವರ ಹಣೆಯಲ್ಲಿ ಬರೆದಿದ್ರೆ ಸಿಎಂ ಆಗುತ್ತಾರೆ. ನವೆಂಬರ್ 15ರ ಕ್ರಾಂತಿ ಬಗ್ಗೆ ಮಾಹಿತಿ ಇಲ್ಲ ನವೆಂಬರ್ ಅಂದ್ರೆ ನನಗೆ ನೆನಪಾಗೋದು ಕನ್ನಡ ರಾಜ್ಯೋತ್ಸವ. ಸಿದ್ದರಾಮಯ್ಯ ಮತ್ತೆ ಚುನಾವಣೆಯಲ್ಲಿ ಸ್ಪರ್ಧೆಸಿದರೆ ಒಳ್ಳೆಯದು.
98-95 ವಯಸ್ಸು ಆಗಿರುವವರು ರಾಜಕೀಯದಲ್ಲಿ ಇದ್ದಾರೆ. ರಾಜಣ್ಣ ಸಲಹೆ ಅಭಿಪ್ರಾಯಗಳನ್ನು ವರಿಷ್ಟರಿಗೆ ತಿಳಿಸ್ತಾರೆ, ಸ್ವಾಗತ ಎಲ್ಲಾ ಸಂದರ್ಭದಲ್ಲಿ ಎಲ್ಲರನ್ನು ಸಂತೋಷಪಡಿಸಲು ಆಗಲ್ಲ ನಾನು ಯಾವಾಗ್ಲೂ ಎಣ್ಣೆಯನ್ನು ಮೈಗೆ ಹಚ್ಚಿಕೊಳ್ಳುವುದಿಲ್ಲ. ಹೆಚ್ಚುವರಿ ಉಪಮಂತ್ರಿಗಳ ನೇಮಕಕ್ಕೆ ಒತ್ತಾಯ ವಿಚಾರವಾಗಿ, ಎಲ್ಲರ ಸಲಹೆಗಳನ್ನು ಹೈಕಮಾಂಡ್ ಗಮನಿಸುತ್ತೆ. ದಲಿತ ಸಿಎಂ ಚರ್ಚೆ ವಿಚಾರ ಸ್ವಾಗತ, ಸಮಾವೇಶ ಒಳ್ಳೆಯದು ಎಂದು ಮಾಜಿ ಸಂಸದ ಡಿಕೆ ಸುರೇಶ್ ಹೇಳಿಕೆ ನೀಡಿದರು.








