ಬೆಂಗಳೂರು : ಬೆಂಗಳೂರಲ್ಲಿ ಅಪಹರಣ ಪ್ರಕರಣಕ್ಕೆ ಸಂಬಂಧಪಟ್ಟಂತೆ ವ್ಯಕ್ತಿ ಒಬ್ಬರನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿ ಹಣ ಕೊಡದಿದ್ದರೆ ರೇಣುಕಾಸ್ವಾಮಿ ರೀತಿ ಸಾಯಬೇಕಾಗುತ್ತದೆ ಎಂದು ಧಮ್ಕಿ ಹಾಕಿರುವ ಘಟನೆ ಬೆಂಗಳೂರಿನ ಚಂದ್ರಲೇಔಟ್ ನಲ್ಲಿ ನಡೆದಿದೆ. ಮಂಡ್ಯ ಮೂಲದ ಬಾಗೇಗೌಡನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಲಾಗಿದ್ದು ಮಂಜುನಾಥ್ ಹಲಗೂರು ಮತ್ತು ಪರಮೇಶಪ್ಪ ಹಲಗೂರು ನಿಂದ ಈ ಒಂದು ಕೃತ್ಯ ನಡೆದಿದೆ.
ಮಂಜುನಾಥ್ ಹಾಗೂ ಬಾಗೇಗೌಡ ಎರಡು ವರ್ಷದಿಂದ ಸ್ನೇಹಿತರು ಗ್ಲೋಬಲ್ ಲಿಮಿಟೆಡ್ ಕಂಪನಿಯಲ್ಲಿ ಇಬ್ಬರು ಹೂಡಿಕೆ ಮಾಡಿದ್ದರು. ಕೊನೆಗೆ ಕಂಪನಿ ನಷ್ಟವಾಗಿ ಆ ಪ್ರಕರಣ ಸದ್ಯ ಸಿಐಡಿ ತನಿಖೆಯಲ್ಲಿ ಇದೆ. ಬಾಗೇಗೌಡನನ್ನು ನಂಬಿ ಹಣ ಹೂಡಿಕೆ ಮಾಡಿದ್ದರಿಂದ ಮಂಜುನಾಥ್ ಬಾಗೇಗೌಡನ ಸಿಟ್ಟಾಗಿದ್ದ ಹಾಗಾಗಿ ಪ್ಲಾನ್ ಮಾಡಿ ಬಾಗೇಗೌಡನನ್ನು ಕರೆಸಿಕೊಂಡಿದ್ದ. ಸನ್ ಶೈನ್ ಹೋಟೆಲ್ ನಲ್ಲಿ ಮಂಜುನಾಥ್ ರೂಮ್ ಬುಕ್ ಮಾಡಿದ್ದ. ಬಳಿಕ ಆಚೆ ಹೋಗಿ ಬರೋಣ ಎಂದು ಗೋದಾಮಿಗೆ ಕರೆದುಕೊಂಡು ಹೋಗಿದ್ದ.
ಗೋದಾಮಿನಲ್ಲಿ ಎಂಟು ಜನರ ಜೊತೆ ಮಂಜುನಾಥ್ ಹಲ್ಲೆ ಮಾಡಿದ್ದಾನೆ. ಹಣ ಕೊಡದೆ ಹೋದರೆ ರೇಣುಕಾಸ್ವಾಮಿ ರೀತಿ ಕೊಲೆಯಾಗುತ್ತಿಯ ಎಂದು ಧಮ್ಕಿ ಹಾಕಿದ್ದಾನೆ ಹಾಗೆ ಬಲವಂತವಾಗಿ ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದಾರೆ 44 ಲಕ್ಷದಷ್ಟು ಹಣ ಕೊಡಬೇಕು ಎಂದು ಬಲವಂತವಾಗಿ ಅಗ್ರಿಮೆಂಟ್ ಹಾಕಿಕೊಂಡಿದ್ದು ಬಾಗೇಗೌಡನ ಬಾಮೈದ ನಿಂದ ಚೆಕ್ ಧರಿಸಿ ಸಹಿ ಮಾಡಿಸಿ ಅಗ್ರಿಮೆಂಟ್ ಹಾಕಿಕೊಂಡಿದ್ದಾರೆ ಕಿಡ್ನ್ಯಾಪ್ ಮಾಡಿ ಹಲ್ಲೆ ಮಾಡಿದ ಆರೋಪಿಗಳ ವಿರುದ್ಧ ಸದ್ಯ ಎಫ್ ಐ ಅರ್ ದಾಖಲಾಗಿದ್ದು ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.








