ಬೆಂಗಳೂರು : ರಾಜ್ಯ ಸಾರಿಗೆ ಇಲಾಖೆಯು ವಾಹನ ಚಾಲಕರು,ಮಾಲೀಕರಿಗೆ ಸಿಹಿಸುದ್ದಿಯೊಂದು ನೀಡಿದ್ದು, ಇನ್ಮುಂದೆ ರಾಜ್ಯ ಸಾರಿಗೆ ಇಲಾಖೆಯ ಈ 30 ಸೇವೆಗಳು ಆನ್ ಲೈನ್ ನಲ್ಲಿ ಸಿಗಲಿವೆ.
ಆನ್‌ಲೈನ್‌ನಲ್ಲಿ ಲಭ್ಯ ಸೇವೆಗಳು –
ಕಲಿಕಾ ಚಾಲನಾ ಅನುಜ್ಞಾ ಪತ್ರ
ಕಲಿಕಾ ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ
ಕಲಿಕಾ ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ
ನಕಲು ಕಲಿಕಾ ಚಾಲನಾ ಅನುಜ್ಞಾ ಪತ್ರ ನೀಡುವಿಕೆ
ನಕಲು ಚಾಲನಾ ಅನುಜ್ಞಾ ಪತ್ರ ನೀಡುವಿಕೆ
ಚಾಲನಾ ಅನುಜ್ಞಾ ಪತ್ರ ನವೀಕರಣ
ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ
ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ
ಚಾಲನಾ ಅನುಜ್ಞಾ ಪತ್ರ ವಹಿ ಪಡೆಯುವಿಕೆ
ಅಂತರರಾಷ್ಟ್ರೀಯ ಚಾಲನಾ ಪರವಾನಗಿ ನೀಡುವಿಕೆ
ನಿರ್ವಾಹಕ ಚಾಲನಾ ಅನುಜ್ಞಾ ಪತ್ರ ನವೀಕರಣ
ನಕಲು ನಿರ್ವಾಹಕ ಚಾಲನಾ ಅನುಜ್ಞಾ ಪತ್ರ ನೀಡುವಿಕೆ
ನಿರ್ವಾಹಕ ಚಾಲನಾ ಅನುಜ್ಞಾ ಪತ್ರದಲ್ಲಿ ವಿಳಾಸ ಬದಲಾವಣೆ
ನಿರ್ವಾಹಕ ಚಾಲನಾ ಅನುಜ್ಞಾ ಪತ್ರದಲ್ಲಿ ಹೆಸರು ಬದಲಾವಣೆ ಮೋಟಾರು ವಾಹನದ ತಾತ್ಕಾಲಿಕ ನೋಂದಣಿಗೆ ಅರ್ಜಿ
ವಾಹನದ (ಫುಲ್ಲಿ ಬಿಲ್ಟ್) ಹೊಸ ನೋಂದಣಿಗೆ ಅರ್ಜಿ
ನಕಲು ನೋಂದಣಿ ಪ್ರಮಾಣಪತ್ರ ನೀಡುವಿಕೆ
ವಾಹನಕ್ಕೆ ಆಕ್ಷೇಪಣಾ ರಹಿತ ಪ್ರಮಾಣಪತ್ರ ನೀಡುವಿಕೆ (ಎನ್ ಒ ಸಿ/ ಸಿಸಿ)
ನೋಂದಣಿ ಪ್ರಮಾಣಪತ್ರದಲ್ಲಿ ವಿಳಾಸ ಬದಲಾವಣೆ
ವಾಹನ ನೋಂದಣಿ ಪ್ರಮಾಣಪತ್ರ ವಹಿ ಪಡೆಯುವಿಕೆ
ವಾಹನ ನೋಂದಣಿಯ ಮಾಲೀಕತ್ವ ವರ್ಗಾವಣೆಯ ನೋಟೀಸು
ವಾಹನ ನೋಂದಣಿಯ ಮಾಲೀಕತ್ವ ವರ್ಗಾವಣೆಗೆ ಅರ್ಜಿ
ವಾಹನದ ಮೇಲೆ ಕಂತು-ಕರಾರು ನಮೂದನೆಗೆ ಹಿಂಬರಹ
ವಾಹನದ ಹೊಸ ರಹದಾರಿಗೆ ಅರ್ಜಿ
ವಾಹನದ ನಕಲು ರಹದಾರಿ ನೀಡಿಕೆ
ಶಾಶ್ವತವಾಗಿ ವಾಹನದ ರಹದಾರಿ ಅಧ್ಯರ್ಪಣೆ
ವಾಹನದ ರಹದಾರಿ ನವೀಕರಣ
ವಾಹನಕ್ಕಾಗಿ ವಿಶೇಷ ರಸ್ತೆಗಾಗಿ ಅರ್ಜಿ
ವಾಹನಕ್ಕೆ ತಾತ್ಕಾಲಿಕ ರಹದಾರಿ ಕೋರಿ ಅರ್ಜಿ
ವಾಹನ ಮಾಲೀಕರ/ ಚಾಲನಾ ಅನುಜ್ಞಾ ಪತ್ರ ಹೊಂದಿರುವವರ ಮೊಬೈಲ್ ಸಂಖ್ಯೆಯನ್ನು ತಂತ್ರಾಂಶದಲ್ಲಿ ಉನ್ನತೀಕರಿಸುವುದು.
ಕಚೇರಿಗಳಿಗೆ ಭೇಟಿ ನೀಡಿ ಪಡೆಯಬಹುದಾದ ಸೇವೆಗಳು
ಬದಲಿ ಚಾಲನಾ ಅನುಜ್ಞಾ ಪತ್ರ
ಚಾಲನಾ ಅನುಜ್ಞಾ ಪತ್ರದಲ್ಲಿ ಬಯೋಮೆಟ್ರಿಕ್ ಬದಲಾವಣೆ
ಚಾಲನಾ ಅನುಜ್ಞಾ ಪತ್ರದಲ್ಲಿನ ವಾಹನ ವರ್ಗವನ್ನು ಸರೆಂಡರ್ ಮಾಡುವುದು
ಅಪಾಯಕಾರಿ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ಓಡಿಸಲು ಚಾಲನಾ ಅನುಜ್ಞಾ ಪತ್ರದಲ್ಲಿ ಹಿಂಬರಹ ನೀಡುವಿಕೆ
ಗುಡ್ಡಗಾಡು / ಬೆಟ್ಟದ ಪ್ರದೇಶದಲ್ಲಿ ವಾಹನಗಳನ್ನು ಓಡಿಸಲು ಚಾಲನಾ ಅನುಜ್ಞಾ ಪತ್ರದಲ್ಲಿ ಹಿಂಬರಹ ನೀಡುವಿಕೆ
ರಕ್ಷಣಾ ಇಲಾಖೆಯವರಿಗೆ ಚಾಲನಾ ಅನುಜ್ಞಾ ಪತ್ರ ನೀಡುವಿಕೆ
ರಕ್ಷಣಾ ಇಲಾಖೆಯವರು ಹೊಂದಿರುವ ಚಾಲನಾ ಅನುಜ್ಞಾ ಪತ್ರದಲ್ಲಿ ಹೆಚ್ಚುವರಿ ವಾಹನ ವರ್ಗ ಸೇರ್ಪಡೆ
ಚಾಲಕರಿಗೆ ಸಾರ್ವಜನಿಕ ಸೇವಾ ವಾಹನ ಬ್ಯಾಡ್ಜ್ ವಿತರಣೆ
ನಿರ್ವಾಹಕ ಚಾಲನಾ ಅನುಜ್ಞಾ ಪತ್ರದಲ್ಲಿ ಬಯೋಮೆಟ್ರಿಕ್ ಬದಲಾವಣೆ
ವಾಹನದ ಕಂತು-ಕರಾರು ರದ್ದತಿ
ವಾಹನದ ರಹದಾರಿ ವರ್ಗಾವಣೆ
ವಾಹನದ ರಹದಾರಿ ವರ್ಗಾವಣೆ (ಮರಣ ಹೊಂದಿದ್ದಲ್ಲಿ)
ವಾಹನದ ರಹದಾರಿಯ ಆಥೋರೈಸೆಷನ್ ನವೀಕರಣ
ವಾಹನದ ನಕಲು ಅರ್ಹತಾ ಪ್ರಮಾಣಪತ್ರ ನೀಡಿಕೆ
( ಈ ಸೇವೆಗಳ ತಂತ್ರಾಂಶ ಅಭಿವೃದ್ಧಿಗಾಗಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ).
ರಸ್ತೆ ಸುರಕ್ಷತೆಯೊಂದಿಗೆ ಪ್ರಗತಿಯ ದಾಪುಗಾಲು@CMofKarnataka @siddaramaiah @DKShivakumar @RLR_BTM pic.twitter.com/WhGEMhoJx9
— DIPR Karnataka (@KarnatakaVarthe) October 28, 2025








