ತುಮಕೂರು : ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕುರಿತಂತೆ ಈಗಾಗಲೇ ಹಲವಾರು ಚರ್ಚೆಗಳು ಆರಂಭವಾಗಿದ್ದು ಇತ್ತೀಚಿಗೆ ಯತೀಂದ್ರ ಸಿದ್ದರಾಮಯ್ಯ ಅವರು ನಮ್ಮ ತಂದೆ ರಾಜಕೀಯ ಕೊನೆಗಾಲದಲ್ಲಿ ಇದ್ದಾರೆ ಅವರ ನಂತರ ಹಿಂದೂ ಸಂಘಟನೆಯನ್ನು ಸತೀಶ್ ಜಾರಕಿಹೊಳಿ ಮುನ್ನಡೆಸಲಿದ್ದಾರೆ ಆ ಅರ್ಹತೆ ಅವರಿಗಿದೆ ಇದೆ ಎಂದು ಪರೋಕ್ಷವಾಗಿ ನೆಕ್ಸ್ಟ್ ಸಿಎಂ ಸತೀಶ್ ಜಾರಕಿಹೊಳಿ ಎಂದು ಹೇಳಿಕೆ ನೀಡಿದರು.
ಅಲ್ಲದೇ ಇಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ಕೆ.ಎಚ್ ಮುನಿಯಪ್ಪ ಅವರು ಹಿರಿಯರು ಅವರಿಗೆ ಸಿಎಂ ಆಗುವ ಎಲ್ಲಾ ಅರ್ಹತೆ ಇದೆ.ಅವರು ಮುಖ್ಯಮಂತ್ರಿ ಆದರೆ ನನಗೆ ತುಂಬಾ ಖುಷಿಯಾಗುತ್ತದೆ. ನಾನು ಅದನ್ನು ಸ್ವಾಗತ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. ಇದೀಗ ವೀರಭದ್ರ ಸ್ವಾಮಿಜಿಗಳು ಜಿ.ಪರಮೇಶ್ವರ್ ಅವರು ಮುಖ್ಯಮಂತ್ರಿ ಆಗಲಿ ಎಂದು ತಮ್ಮ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.
ತುಮಕೂರಿನಲ್ಲಿ ನಡೆದ ಸಿದ್ದರಬೆಟ್ಟದ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಅವರು ಚೆಟ್ಟೇನಹಳ್ಳಿಯಲ್ಲಿ ಧಾರ್ಮಿಕ ಸಭೆಯಲ್ಲಿ ಹೇಳಿಕೆ ನೀಡಿದ್ದು ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚೆಟ್ಟೇನಹಳ್ಳಿ ಪರಮೇಶ್ವರ್ ಸಿಎಂ ಆಗಲಿ ಎನ್ನುವುದು ನಮ್ಮೆಲ್ಲರ ಬೇಡಿಕೆ ಇದೆ ಸಿಎಂ ಸ್ಥಾನದ ಬಗ್ಗೆ ಇತ್ತೀಚಿಗೆ ಚರ್ಚೆಗಳನ್ನು ಗಮನಿಸುತ್ತಿದ್ದೇವೆ.
ತುಮಕೂರು ಜಿಲ್ಲೆಯ ಹಲವು ವರ್ಷಗಳ ಬೇಡಿಕೆಯಂತೆ ಪರಮೇಶ್ವರ ಸಿಎಂ ಆದರೆ ಬೇಡಿಕೆ ಈಡೇರಲಿದೆ ಪರಮೇಶ್ವರ್ ರಾಜ್ಯ ಕಂಡ ಜನರು ಸಂಸ್ಕಾರವಂತರು ವಿದ್ಯಾವಂತರು ರಾಜಕೀಯ ಜೀವನದಲ್ಲಿ ಗುರುತಿಸಿಕೊಂಡಿದ್ದಾರೆ ಪರಮೇಶ್ವರ್ ಸಿಎಂ ಆದರೆ ಹಲವು ದಶಕಗಳ ಕನಸು ನೆರವೇರಲಿದೆ ಎಂದು ಧಾರ್ಮಿಕ ಸಭೆಯಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ ನೀಡಿದರು ಶಿವಾಚಾರ್ಯ ಶ್ರೀಗಳ ಮಾತು ಕೇಳಿದ್ದಕ್ಕೆ ಈ ಪರಮೇಶ್ವರ್ ಮುಗುಳ್ನಕರು.








