ಬೆಂಗಳೂರು: ನಗರದಲ್ಲಿ ಬೆಚ್ಚಿ ಬೀಳಿಸೋ ಘಟನೆ ಎನ್ನುವಂತೆ ಕುಡಿಯಲು ಹಣ ಕೊಡಲಿಲ್ಲ ಎಂಬುದಾಗಿ ತನ್ನ ಸ್ನೇಹಿತ ಮೇಲೆಯೇ ಸ್ನೇಹಿತ ಲಾಂಗ್ ನಿಂದ ಹಲ್ಲೆ ಮಾಡಿರುವಂತ ಘಟನೆ ನಡೆದಿದೆ.
ಬೆಂಗಳೂರಿನ ಅರಸು ಕಾಲೋನಿಯ ಮಾರಮ್ಮ ದೇಗುಲದ ಬಳಿಯಲ್ಲಿ ಈ ಘಟನೆ ನಡೆದಿದೆ. ಡೆಲಿವರಿ ಬಾಯ್ ಮುನಿಯಪ್ಪ ಮೇಲೆ ಗೌತಮ್, ಸೂರ್ಯ ಲಾಂಗ್ ನಿಂದ ಹಲ್ಲೆ ಮಾಡಿದ್ದಾರೆ. ಅಕ್ಟೋಬರ್.21ರಂದು ರಾತ್ರಿ 10 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಬೆಂಗಳೂರಿನ ಈಸ್ಟ್ ಎಂಡ್ ಬಾರ್ ಒಂದರಲ್ಲಿ ಮದ್ಯವನ್ನು ಮುನಿಯಪ್ಪ ಸೇವಿಸುತ್ತಿದ್ದರು. ಅಲ್ಲಿಗೆ ಬಂದು ಎಣ್ಣೆ ಕೊಡಿಸು ಎಂಬುದಾಗಿ ಆರೋಪಿಗಳಾದಂತ ಗೌತಮ್, ಸೂರ್ಯ ಕೇಳಿದ್ದಾರೆ. ನನ್ನ ಬಳಿ ಹಣ ಇಲ್ಲ. ನಿನಗೆ ಯಾಕೆ ಎಣ್ಣೆ ಕೊಡಿಸಬೇಕು ಎಂಬುದಾಗಿ ಮುನಿಯಪ್ಪ ತಿಳಿಸಿದ್ದಾರೆ.
ಇದೇ ಕಾರಣಕ್ಕೆ ಕೋಪದಲ್ಲಿ ಕಾಲೋನಿ ಮಾರಮ್ಮ ದೇವಸ್ಥಾನದ ಬಳಿಯಲ್ಲಿ ಕಿರಿಕ್ ಮಾಡಲಾಗಿದೆ. ನಾನು ಜೈಲಿನಿಂದ ಹೊರ ಬಂದು 15 ದಿನ ಆಗಿದೆ ಅಷ್ಟೇ. ನನ್ನನ್ನು ಕಂಡ್ರೆ ಭಯ ಇಲ್ವ ಎಂದು ಗೌತಮ್ ಗಲಾಟೆ ಮಾಡಿದ್ದಾರೆ. ಮಾತಿಗೆ ಮಾತು ಬೆಳೆದು ಮುನಿಯಪ್ಪ ಮೇಲೆ ಲಾಂಗ್ ನಿಂದ ಗೌತಮ್ ಹಲ್ಲೆ ಮಾಡಿದ್ದಾರೆ.
ಈ ಘಟನೆ ಸಂಬಂಧ ಆರೋಪಿಗಳಾದಂತ ಗೌತಮ್ ಹಾಗೂ ಸೂರ್ಯನನ್ನು ತಿಲಕ್ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.
ಸಾರ್ವಜನಿಕರೇ ಗಮನಿಸಿ : ನವೆಂಬರ್ 1 ರಿಂದ `ಆಧಾರ್ ಕಾರ್ಡ್ ಅಪ್ ಡೇಟ್’ ನಿಯಮಗಳಲ್ಲಿ ಮಹತ್ವದ ಬದಲಾವಣೆ








