ಬೆಂಗಳೂರು : ಸ್ನೇಹಿತೆಯ ಖಾಸಗಿ ವಿಡಿಯೋ, ಫೋಟೋ ಕದ್ದು ಹಂಚಿ ಬ್ಲಾಕ್ ಮೇಲ್ ಗೆ ಪ್ರಚೋದನೆ ನೀಡಿದ ಆರೋಪದಡಿ ಕಿರುತೆರೆ ನಟಿ ಆಶಾ ಜೋಯಿಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.
ಬೆಂಗಳೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಬ್ಲಾಕ್ಮೇಲ್, ಡೇಟಾ ಕಳ್ಳತನ ಮತ್ತು ಗೌಪ್ಯತೆ ಉಲ್ಲಂಘನೆಯ ಆರೋಪದ ಮೇಲೆ ಎಫ್ಐಆರ್ ದಾಖಲಾಗಿದೆ. ಸ್ನೇಹಿತೆ ಪಾರ್ವತಿ ಅವರ ಖಾಸಗಿ ವಿಡಿಯೋಗಳನ್ನ ಕದ್ದು, ಅವುಗಳನ್ನ ದುರ್ಬಳಕೆ ಮಾಡಿ 2 ಕೋಟಿ ರೂಪಾಯಿಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪ ಕೇಳಿಬಂದಿದೆ. ದೂರುದಾರರಾದ 61 ವರ್ಷದ ಪಾರ್ವತಿ ಅವರು, ಆಶಾ ಜೋಯಿಸ್ ಅವರು ತಮ್ಮ ಖಾಸಗಿ ವಿಡಿಯೋಗಳು ಮತ್ತು ಫೋಟೋಗಳನ್ನ ಕದ್ದು, ಅವುಗಳನ್ನ ದುರುಪಯೋಗಪಡಿಸಿಕೊಂಡು ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತಿಲಕ್ ನಗರ ಪೊಲೀಸರು ಆಶಾ ಜೋಯಿಸ್ ವಿರುದ್ಧ ಬ್ಲಾಕ್ಮೇಲ್, ಡೇಟಾ ಕಳ್ಳತನ ಮತ್ತು ಗೌಪ್ಯತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.








