ವಿಜಯಪುರ : ಆರ್ ಎಸ್ ಎಸ್ ಪಾಠ ಸಂಚಲನಕ್ಕೆ ಅನುಮತಿ ನೀಡುವ ವಿಚಾರಕ್ಕೆ ಸಂಬಂಧಪಟ್ಟಂತೆ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದು, ಅವರು ಏನು ಮಾಡುತ್ತಾರೆ ಮಾಡಲಿ ಅವರಿಗೆ ಅಧಿಕಾರ ಇರುವುದು ಏನು ಮಾಡುತ್ತಾರೆ ಮಾಡಲಿ ಇನ್ನೂ ಎರಡು ವರ್ಷ ಎಷ್ಟು ಹಾರಾಡುತ್ತಾರೆ ಹಾರಾಡಲಿ ಮುಂದೆ ನಾವೇ ಅಧಿಕಾರಕ್ಕೆ ಬರುತ್ತೇವೆ. ಆಗ ಬಿವೈ ವಿಜಯೇಂದ್ರ ಏನು ಮುಖ್ಯಮಂತ್ರಿ ಆಗಿ ಬರುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದರು.
ವಿಜಯಪುರದಲ್ಲಿ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಭವಿಷ್ಯದ ನಾಯಕ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಯತಿಂದ್ರ ಹೇಳಿದ್ದಾರೆ ಅಂದರೆ ಸಿಎಂ ಸಿದ್ದರಾಮಯ್ಯ ಹೇಳಿದಂತೆ, ಬೆಂಗಳೂರಿನಲ್ಲಿ ಕುಳಿತು ಕಲೆಕ್ಷನ್ ಯಾರು ಮಾಡುತ್ತಿದ್ದಾರೆ. ಯತೀಂದ್ರ ಮತ್ತು ಭೈರತಿ ಸುರೇಶ್ ಇಬ್ಬರು ಕಲೆಕ್ಷನ್ ಮಾಸ್ಟರ್ ಗಳು. ಸಿಎಂ ಸಿದ್ದರಾಮಯ್ಯನವರು ಕಲೆಕ್ಷನ್ ಮಾಡಲು ಬಿಟ್ಟಿದ್ದಾರೆ.
ಯತೀಂದ್ರ ಏನು ಹೇಳುತ್ತಾರೋ ಅದನ್ನು ಸಿದ್ದರಾಮಯ್ಯ ಹೇಳಿದಂತೆ. ಸತೀಶ್ ಜಾರಕಿಹೊಳಿ ಅಯೋಗ್ಯನಿದ್ದಾನೆ ಎಂದು ಸಿದ್ದರಾಮಯ್ಯ ಹೇಳಲಿ ಅಥವಾ ನನ್ನ ಮಗ ಅಯೋಗ್ಯ ಇದ್ದಾನೆ ಬುದ್ದಿ ಕೆಟ್ಟಿದೆ ಎಂದು ಹೇಳಲಿ. ಯತೀಂದ್ರ ಹೇಳಿದ್ದು ಸತೀಶ ಜಾರಕಿಹೊಳಿ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಹೊಂದಿದ್ದಾರೆ ಅಂತ ಹೇಳಿದ್ದಾರೋ ಅಥವಾ ಅಹಿಂದ ನಾಯಕ ಆಗುವ ಅರ್ಹತೆ ಹೊಂದಿದ್ದಾರೆ ಎಂದು ಹೇಳಿದ್ದಾರೋ? ಯತೀಂದ್ರ ಹೇಳಿದ್ದಾರೆ ಅಂದರೆ ಸಿಎಂ ಸಿದ್ದರಾಮಯ್ಯ ಹೇಳಿದಂತೆ ಎಂದು ಶಾಸಕ ಯತ್ನಾಳ ಹೇಳಿಕೆ ನೀಡಿದರು.
BIG NEWS : ಅಕ್ರಮವಾಗಿ `BPL’ ರೇಷನ್ ಕಾರ್ಡ್ ಪಡೆದವರಿಗೆ ಸರ್ಕಾರದಿಂದ ಬಿಗ್ ಶಾಕ್.!
ALERT : ನೀವು ಸೇವಿಸುವ `ಮಾತ್ರೆಗಳು’ ಅಸಲಿಯೋ ನಕಲಿಯೋ? ಜಸ್ಟ್ ಈ ರೀತಿ ಚೆಕ್ ಮಾಡಿಕೊಳ್ಳಿ.!








