ಬೆಂಗಳೂರು : ಬೆಂಗಳೂರಲ್ಲಿ ಈರುಳ್ಳಿ ಮೂಟೆ ಅಡಿ ಅಕ್ರಮವಾಗಿ ಶ್ರೀಗಂಧ ಸಾಗಾಟ ಮಾಡಲಾಗುತ್ತಿತ್ತು ಟೆಂಪೋದಲ್ಲಿ ಈರುಳ್ಳಿ ಮೂಟೆ ಅಂತ ಶ್ರೀಗಂಧ ಸಾಗಾಟ ಮಾರಾಟ ಮಾಡಲಾಗುತ್ತಿತ್ತು ಸುಮಾರು ಒಂದು ಕೋಟಿಗೂ ಹೆಚ್ಚು ಮೌಲ್ಯದ 750 ಕೆಜಿ ಶ್ರೀಗಂಧವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆಂಧ್ರಪ್ರದೇಶದ ಕರ್ನೂಲ್ ನಿಂದ 750 ಕೆಜಿ ಶ್ರೀಗಂಧವನ್ನು ಬೆಂಗಳೂರಿಗೆ ಆರೋಪಿಗಳು ಸಾಗಾಟ ಮಾಡುತ್ತಿದ್ದರು. ನಕ ಬಂದಿಹಾಕಿ ಪೊಲೀಸರು ತಪಾಸಣೆ ನಡೆಸಿದ ಸಂದರ್ಭದಲ್ಲಿ ಪಿಕಪ್ ವಾಹನ ಬರುತ್ತಿರುವಾಗ ಅದನ್ನು ಪರಿಶೀಲನೆ ಮಾಡಿದಾಗ ಅದರ ಮೇಲ್ಭಾಗದಲ್ಲಿ ಈರುಳ್ಳಿ ಮೂಟೆ ಏರಿಸಲಾಗುತ್ತೆ ಬಳಿಕ ಕೆಳಗಡೆ ಇನ್ನಷ್ಟು ಪರಿಶೀಲನೆ ಮಾಡಿದಾಗ ಶ್ರೀಗಂಧದ ಮರದ ತುಂಡುಗಳು ಪತ್ತೆಯಾಗಿವೆ.
18 ಬ್ಯಾಗ್ ಗಳ್ಳಲ್ಲಿ ಶ್ರೀಗಂಧ ಮರದ ತುಂಡುಗಳನ್ನು ಪೊಲೀಸರು ಅವವಶಕ್ಕೆ ಶ್ಯಕ ಪಡೆದುಕೊಂಡಿದ್ದು, ಸಿದ್ದಾಪುರ ಪೊಲೀಸರು ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದು ಶೇಕ್ ಶಾರುಖ್, ಶೇಕ್ ಅಬ್ದುಲ್ ಕಲಾಂ, ಪರಮೇಶ್ ರಾಮ ಭೂಪಾಲ್ ನನ್ನು ರೆಸ್ಟ್ ಮಾಡಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ ಡೀಲರ್ ಒಬ್ಬರಿಗೆ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.








