ಚಿಕ್ಕಮಗಳೂರು : ಇತ್ತೀಚಿಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮನೆಗಳ್ಳತನದಲ್ಲಿ ಚಡ್ಡಿ ಗ್ಯಾಂಗ್ ಅಲರ್ಟ್ ಆಗಿತ್ತು. ಇದೀಗ ಮನೆಗಳ್ಳತನ ಮಾಡುತ್ತಿದ್ದ ಚಡ್ಡಿ ಗ್ಯಾಂಗಿನ ಇಬ್ಬರು ಕಳ್ಳರನ್ನು ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ
ಮಹಾರಾಷ್ಟ್ರ ಮೂಲದ ಪಪ್ಪು ಟಿಪ್ಪ ಪವಾರ್ ಮತ್ತು ಮಂಗೇಶ್ ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಬಂಧಿತರ ಬಳಿ ಇದ್ದ 32 ಲಕ್ಷ ಮೌಲ್ಯದ ಚಿನ್ನ ಬೆಳ್ಳಿಯನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸ್ ಬಡಾವಣೆಯಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು.
ಇನ್ನುಳಿದ ಆರೋಪಿಗಳಿಗಾಗಿ ಪೊಲೀಸರು ತೀವ್ರವಾದ ಹುಡುಕಾಟ ನಡೆಸಿದ್ದಾರೆ. ಆರೋಪಿಗಳ ವಿರುದ್ಧ ಚಿತ್ರದುರ್ಗ, ಗದಗ, ಬಳ್ಳಾರಿ ಸೇರಿದಂತೆ ರಾಜ್ಯದ ಹಲವು ಠಾಣೆಗಳಲ್ಲಿ ಮನೆಗಳತನ ಪ್ರಕರಣಗಳು ದಾಖಲಾಗಿದ್ದವು.








