ಬೆಂಗಳೂರು : ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ನೀಡುತ್ತಿರುವುದು ಈ ಹಿಂದೆ ಕಂಡುಬಂದಿತ್ತು.ಆದರೆ ಇದೀಗ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಬ್ಬಂದಿಯ ಕಳ್ಳಾಟ ಮತ್ತೊಮ್ಮೆ ಬಯಲಾಗಿದೆ. ಜೈಲಿನೊಳಗೆ ಫೋನ್ ತೆಗೆದುಕೊಂಡು ಹೋಗುತ್ತಿದ್ದ ಸಿಬ್ಬಂದಿ ಸಿಗಿ ಬಿದ್ದಿದ್ದಾನೆ.
ತಪಾಸಣೆಯ ವೇಳೆ ಸಿಬ್ಬಂದಿ ಅಮರ್ ಪ್ರಾಂಜೆ ಸಿಗಿ ಬಿದ್ದಿದ್ದಾನೆ. ಒಂದು ಸ್ಮಾರ್ಟ್ ಫೋನ್ ಮತ್ತು ಒಂದು ಬ್ಯಾಕ್ ಕವರ್ ಇಟ್ಟುಕೊಂಡಿದ್ದ. ಅಲ್ಲದೆ ಎರಡು ಇಯರ್ ಫೋನ್ ಗಳನ್ನು ಸಹ ತೆಗೆದುಕೊಂಡು ಹೋಗುತ್ತಿದ್ದ. ಖಾಸಗಿ ಸ್ಥಳದಲ್ಲಿ ಜೈಲು ಸಿಬ್ಬಂದಿ ಅಮರ್ ಇಟ್ಟುಕೊಂಡು ಒಳಗಡೆ ತೆರಳುವ ವೇಳೆ ತಪಾಸನೆ ನಡೆಸಿದ್ದಾರೆ. ಜೈಲಾಧಿಕಾರಿಗಳು ಸಿಬ್ಬಂದಿಯನ್ನು ತಪಾಸನೆ ನಡೆಸಿ ವಸ್ತುಗಳು ಪತ್ತೆಯಾದ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








