ಬೆಂಗಳೂರು : ಬೆಂಗಳೂರಿನಲ್ಲಿ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದು, ಬೆಳಗ್ಗೆ 7 ಗಂಟೆಯಿಮದ 9.30ರವರೆಗೆ ಶಾಲಾ ಬಸ್ ಚಾಲಕರ ತಪಾಸಣೆ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು 5,881 ಶಾಲಾ ಬಸ್ ಚಾಲಕರ ತಪಾಸಣೆ ನಡೆಸಲಾಗಿದ್ದು, ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ 36 ಚಾಲಕರ ವಿರುದ್ಧ ಪ್ರಕರಣ ದಾಖಲಾಗಿದೆ. ಡಿಎಲ್ ರದ್ದುಪಡಿಸುವಂತೆ ಆರ್ ಟಿಒಗೆ ಸಂಚಾರಿ ಪೊಲೀಸರು ಪತ್ರ ಬರೆದಿದ್ದಾರೆ.
ರಾಜ್ಯ ಸಾರಿಗೆ ಅಧಿಕಾರಿಗಳ ತಂಡದ ಕ್ಷೀಪ್ರ ಕಾರ್ಯಚರಣೆ ನಡೆಸಿದ್ದು,ಅಪರ ಸಾರಿಗೆ ಆಯುಕ್ತಾರಾದ ಓಂಕಾರೇಶ್ವರಿ, ಜಂಟಿ ಸಾರಿಗೆ ಆಯುಕ್ತರಾದ ಶೋಭಾ ಹಾಗೂ ಗಾಯತ್ರಿ ನೇತೃತ್ವದ ತಂಡ ನಗರದ ಹೊರವಲಯದಲ್ಲಿರುವ ಅತ್ತಿಬೆಲೆ ಚೆಕ್ಪೋಸ್ಟ್ ನಲ್ಲಿ ತಪಾಸಣೆ ನಡೆಸಿದೆ.
ರಾಜ್ಯ ಸಾರಿಗೆ ಇಲಾಖೆ ತೆರಿಗೆ ಪಾವತಿಸದೆ ಪ್ರಯಾಣಿಕರನ್ನ ಸಾಗಿಸುತ್ತಿದ್ದ 30ಕ್ಕೂ ಹೆಚ್ಚು ಖಾಸಗಿ ಬಸ್ ಗಳ ವಶಕ್ಕೆ ಪಡೆದಿದೆ.ಮೋಟಾರು ವಾಹನ ನಿರೀಕ್ಷಕರಾದ ನವೀನ , ವಿಶ್ವನಾಥ್ ಶೆಟ್ಟಿ, ಅಮೂಲ್ಯ, ಸುಧಾಕರ್, ನರಸಿಂಹ ಮೂರ್ತಿ ಹಾಗೂ ರಾಜೇಶ್ ಆರ್ ಟಿ ಓ ಗಳಾದ ದೀಪಕ್, ಪ್ರಮಾತೇಶ ಹಾಗೂ ರಾಜಕುಮಾರ್ ಭಾಗಿಯಾಗಿದ್ದರು.








