ಹಾವೇರಿ : ಮನೆಯಲ್ಲಿ ಪುಟ್ಟ ಮಕ್ಕಳು ಆಟ ಆಡುತ್ತಿರುವಾಗ ಪೋಷಕರು ಆದಷ್ಟು ಎಚ್ಚರ ವಹಿಸಬೇಕು ಇಲ್ಲವಾದರೆ ಹಲವು ದುರಂತಗಳು ಸಂಭವಿಸುತ್ತವೆ ಇದೀಗ ಇಂತಹದ್ದೇ ದುರಂತ ಹಾವೇರಿಯಲ್ಲಿ ನಡೆದಿದ್ದು ಮನೆಯ ಮುಂದೆ ಆಟವಾಡುವಾಗ ಬಕೆಟ್ನಲ್ಲಿ ತಲೆಕೆಳಗಾಗಿ ಬಿದ್ದು ಒಂದು ವರ್ಷದ ಮಗು ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಹೌದು ಆಟವಾಡುವಾಗ ನೀರಿನ ಬಕೆಟ್ ಗೆ ಬಿದ್ದು ಮಗು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ. ಹಾವೇರಿಯ ಶಿವಬಸವ ನಗರದಲ್ಲಿ ಈ ಒಂದು ದುರ್ಘಟನೆ ಸಂಭವಿಸಿದ್ದು, ಬಕೆಟ್ನಲ್ಲಿ ಬಿದ್ದು ದಕ್ಷಿತ್ ಯಳಂಬಳ್ಳಿ ಮಠ (1) ಎನ್ನುವ ಮಗು ಸಾವನ್ನಪ್ಪಿದೆ.
ಬಕೆಟ್ನಲ್ಲಿ ತಲೆಕೆಳಗಾಗಿ ಬಿದ್ದಿದ್ದ ದಕ್ಷೀತ್ ಸಾವನಪ್ಪಿದ್ದಾನೆ. ಕೂಡಲೇ ಮಗುವನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿ ಆಗದೆ ಮಗು ಕೊನೆಯುಸಿರೆಳೆದಿದೆ. ಘಟನೆ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








