ಶಿವಮೊಗ್ಗ: ಜಿಲ್ಲಾ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ ದೀಪಾವಳಿ ಗೋಪೂಜೆ ಸಂದರ್ಭದಲ್ಲಿ ಸಾಗರದ ತಮ್ಮ ಮನೆಯ ಜಾನುವಾರುಗಳ ಮೇಲೆ ಶರಾವತಿ ಪಂಪ್ಡ್ ಸ್ಟೋರೇಜ್ ವಿರೋಧಿಸಿ ಹೇಳಿಕೆಗಳನ್ನು ಬರೆಯುವ ಮೂಲಕ ಗಮನ ಸೆಳೆದಿದ್ದಾರೆ.
ಮಲೆನಾಡು ಭಾಗದಲ್ಲಿ ಗೋಪೂಜೆ ಸಂದರ್ಭದಲ್ಲಿ ಗೋವುಗಳನ್ನು ಶೃಂಗರಿಸುವುದು ನಡೆದುಕೊಂಡು ಬಂದ ಪದ್ದತಿಯಾಗಿದೆ. ದಿನೇಶ್ ಶಿರವಾಳ ಅವರು ತಮ್ಮ ಗೋವಿನ ಮೇಲೆ ಬಣ್ಣದ ಚಿತ್ತಾರದ ಬದಲು ಶರಾವತಿ ಉಳಿಸಿ, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬೇಡ ಎಂಬಿತ್ಯಾದಿ ಘೋಷಣೆಗಳನ್ನು ಬರೆಯುವ ಮೂಲಕ ವಿಶೇಷ ರೀತಿಯಲ್ಲಿ ರಾಜ್ಯ ಸರ್ಕಾರದ ಪಂಪ್ಡ್ ಸ್ಟೋರೇಜ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವಂತ ಅವರು, ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಕೈಬಿಡಲು ಈಗಾಗಲೆ ರಾಜ್ಯ ಸರ್ಕಾರಕ್ಕೆ ರೈತ ಸಂಘದ ನೇತೃತ್ವದಲ್ಲಿ ೧೨ ದಿನಗಳ ನಿರಂತರ ಪ್ರತಿಭಟನೆ ನಡೆಸಿ ಒತ್ತಾಯ ಮಾಡಿದ್ದೇವೆ. ರಾಜ್ಯದ ಬೇರೆಬೇರೆ ಭಾಗಗಳಿಂದ ವಿವಿಧ ಮಠಾಧೀಶರು, ಚುನಾಯಿತ ಪ್ರತಿನಿಧಿಗಳು, ಪರಿಸರ ಹೋರಾಟಗಾರರು, ಬೆಂಬಲ ನೀಡಿದ್ದಾರೆ. ಯೋಜನೆ ಕೈಬಿಡುವವರೆಗೂ ಹೋರಾಟ ಒಂದಿಲ್ಲೊಂದು ರೀತಿಯಲ್ಲಿ ನಡೆಯುತ್ತಲೆ ಇರುತ್ತದೆ ಎಂದು ಹೇಳಿದರು.
ದೀಪಾವಳಿ ಗೋಪೂಜೆ ಸಂದರ್ಭದಲ್ಲಿ ಗೋವುಗಳ ಮೇಲೆ ರಾಸಾಯನಿಕ ಮಿಶ್ರಣವಲ್ಲದ, ಅಪಾಯಕಾರಿಯಲ್ಲದ ಬಣ್ಣ ಬಳಸಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ವಿರೋಧಿಸಿ ಬರಹ ಬರೆಯುವ ಮೂಲಕ ತಮ್ಮ ಪ್ರತಿರೋಧ ವ್ಯಕ್ತಪಡಿದ್ದೇವೆ ಪಶ್ಚಿಮ ಘಟ್ಟಕ್ಕೆ ಮಾರಕವಾಗಿರುವ ಈ ಯೋಜನೆ ಯಾವುದೇ ಕಾರಣಕ್ಕೂ ಕಾರ್ಯಗತವಾಗಲು ಬಿಡುವುದಿಲ್ಲ ಎಂದರು.
ಕೆಪಿಸಿಸಿ ಅಧ್ಯಕ್ಷರು, ಸಿಎಂ ಹುದ್ದೆ ಖಾಲಿ ಇಲ್ಲ, ಚರ್ಚೆಯೇ ಅಪ್ರಸ್ತುತ: ಸಚಿವ ಈಶ್ವರ ಖಂಡ್ರೆ
ಬೆಂಗಳೂರಲ್ಲಿ 2ನೇ ವಿಮಾನ ನಿಲ್ದಾಣದ ವಿಚಾರವಾಗಿ 2-3 ದಿನಗಳಲ್ಲಿ ಎಎಐ ವರದಿ ನೀಡಲಿದೆ: ಸಚಿವ ಎಂ.ಬಿ.ಪಾಟೀಲ