ಬೆಂಗಳೂರು : ಬೆಂಗಳೂರಲ್ಲಿ ವೈದ್ಯೆ ಕೃತಿಕಾ ರೆಡ್ಡಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಆರೋಪಿಯಾಗಿರುವ ಪತಿ ಮಹೇಂದ್ರ ರೆಡ್ಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಬೆಂಗಳೂರಿನ 29ನೇ ACMM ಕೋರ್ಟ್ ಆದೇಶ ಹೊರಡಿಸಿದೆ.
ಬೆಂಗಳೂರಲ್ಲಿ ಕೃತಿಕಾ ರೆಡ್ಡಿ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಪಾಪಿ ಪತಿ ಮಹೇಂದ್ರ ಕೃತಿಕಾಳನ್ನು ಕೊಂದ ನಂತರ ವಾಟ್ಸ್ ಅಪ್ ನಲ್ಲಿ ‘i have killed krutika’ ಎಂದು ಮೆಸೇಜ್ ಮಾಡಿರೋದು ಬೆಳಕಿಗೆ ಬಂದಿದೆ. ಇದೀಗ ಆರೋಪಿಪತಿಯನ್ನು ಪೊಲೀಸರು ಬೆಂಗಳೂರಿನ 29 ನೇ ಎಸಿಎಂಎಂ ಕೋರ್ಟ್ ಗೆ ಹಾಜರುಪಡಿಸಿದ್ದು ವಿಚಾರಣೆ ಬಳಿಕ ಜಡ್ಜ್ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದರು.
ಪ್ರಕರಣ ಹಿನ್ನೆಲೆ?
ವೈದ್ಯೆಯಾಗಿದ್ದ ಪತ್ನಿ ಕೃತಿಕಾ ರೆಡ್ಡಿಯನ್ನು ಕೊಲೆ ಮಾಡಿದ್ದ ಹಂತಕ ಡಾಕ್ಟರ್ ಮಹೇಂದ್ರ ರೆಡ್ಡಿಯ ಕರಾಳ ಮುಖ ತನಿಖೆಯ ವೇಳೆ ಬಯಲಾಗುತ್ತಿದೆ. ವೃತ್ತಿಯಲ್ಲೂ ಇಬ್ಬರೂ ವೈದ್ಯರಾಗಿದ್ದರೂ ಕೂಡ ಪತ್ನಿಯನ್ನು ಯಾಕೆ ಕೊಲೆ ಮಾಡಿದ ಎಂಬ ವಿಚಾರ ಈಗ ಬೆಳಕಿಗೆ ಬಂದಿದೆ.
ಮಹೇಂದ್ರ ರೆಡ್ಡಿ ಮದುವೆಗೂ ಮುನ್ನ ಮತ್ತು ಮದುವೆ ನಂತರವು ಬೇರೆ ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದ ವಿಚಾರ ಪೊಲೀಸರ ತನಿಖೆಯಿಂದ ಹೊರಬಿದ್ದಿದೆ.ಆರೋಪಿಯ ಅಕ್ರಮ ಸಂಬಂಧದ ಬಗ್ಗೆ ಕೃತಿಕಾ ಪೋಷಕರು ಕೂಡ ಆರೋಪಿಸಿದ್ದರು. ಕರ್ನಾಟಕ, ಮುಂಬೈ ಸೇರಿ ಹಲವು ಕಡೆ ಬೇರೆ ಬೇರೆ ಹೆಣ್ಣು ಮಕ್ಕಳ ಜೊತೆಯಲ್ಲಿ ಬಹಳ ಸಲುಗೆಯಿಂದ ಇದ್ದ ಎನ್ನುವುದು ಈಗ ಬಹಿರಂಗವಾಗಿದೆ.