ಬೆಳಗಾವಿ : ಪತಿಯ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಮಹಿಳೆ ಅನ್ನೋದು ಲೆಕ್ಕಿಸದೆ ಪತಿಯ ಸಂಬಂಧಿಕರು ಅಮಾನವೀಯವಾಗಿ ಹಲ್ಲೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬೆಂಬಲವಾಡ ಗ್ರಾಮದಲ್ಲಿ ನಡೆದಿದೆ.
ಹೌದು ಗಂಡನ ಅನೈತಿಕ ಸಂಬಂಧವನ್ನು ಪತ್ನಿ ರಾಜಶ್ರೀ ಪ್ರಶ್ನೆ ಮಾಡಿದ್ದಾರೆ. ಇದನ್ನು ಪ್ರಶ್ನಿಸಿದಕ್ಕೆ ಗಂಡನ ಸಂಬಂಧಿಕರು ರಾಜಶ್ರೀ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ. 4 ದಿನಗಳ ಹಿಂದೆ ಇದೆ ವಿಷಯಕ್ಕೆ ಇಬ್ಬರ ಮಧ್ಯ ಗಲಾಟೆ ಆಗಿತ್ತು. ಪತ್ನಿ ರಾಜಶ್ರೀ ಹಾಗು ಆಕೆಯ ತಾಯಿಯ ಮೇಲೆ ಹಲ್ಲೆ ನಡೆದಿದೆ. ಪತಿ ರಾಕೇಶ್ ಹಾಗು ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಹಲ್ಲೆಗೆ ಒಳಗಾದ ರಾಜಶ್ರೀ ಹಾಗು ತಾಯಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.