ಬೆಂಗಳೂರು : ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಗೋವಿಂದು (68) ಅವರು ಇಂದು ನಿಧನರಾಗಿದ್ದಾರೆ. ಹುಲಿಯ, ಚಲಿಸುವ ಮೋಡಗಳು ಚಿತ್ರಗಳನ್ನು ಇವರು ನಿರ್ಮಿಸಿದ್ದರು.
ಗಂಟಲು ಕ್ಯಾನ್ಸರ್ ನಿಂದ ನಿರ್ಮಾಪಕ ಗೋವಿಂದ ಬಳಲುತ್ತಿದ್ದರು. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಮಧ್ಯಾಹ್ನ 1 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.