ಬೆಂಗಳೂರು: ದಸರಾ ರಜೆ, ಸಾಮಾಜಿಕ, ಶೈಕ್ಷಣಿಕ ಸರ್ವೆ ರಜೆ ನಂತರ ಒಂದು ತಿಂಗಳ ಬಳಿಕ ಇಂದಿನಿಂದ ಸರ್ಕಾರಿ ಶಾಲೆಗಳು ಪುನಾರಂಭಗೊಂಡಿದೆ.
ದಸರಾ ಹಬ್ಬದ ಪ್ರಯುಕ್ತ ಸಾರ್ವಜನಿಕ ಶಿಕ್ಷಣ ಇಲಾಖೆ ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಸೆಪ್ಟೆಂಬರ್ 20ರಿಂದ ಅ.8ರವರೆಗೆ ದಸರಾ ರಜೆ ಘೋಷಣೆ ಮಾಡಿತ್ತು, ಒಟ್ಟು 18 ದಿನಗಳ ಕಾಲ ಶಾಲಾ ವಿದ್ಯಾರ್ಥಿಗಳಿಗೆ ದಸರಾ ರಜೆ ಸಿಕ್ಕಿತ್ತು. ರಾಜ್ಯದಲ್ಲಿ ಜಾತಿಗಣತಿ ಹಿನ್ನೆಲೆಯಲ್ಲಿ ಶಾಲೆಗಳಿಗೆ ಅ.18ರವರೆಗೆ ರಜೆ ಘೋಷಿಸಲಾಗಿತ್ತು. ಬಳಿಕ ದೀಪಾವಳಿ ಹಿನ್ನೆಲೆಯಲ್ಲಿ ಅ.22 ರವರೆಗೆ ರಜೆ ಇತ್ತು. ಹೀಗಾಗಿ ಇಂದಿನಿಂದ ಸರ್ಕಾರಿ ಶಾಲೆಗಳು ಆರಂಭವಾಗಿವೆ.
ರಾಜ್ಯದ ಎಲ್ಲಾ ಶಾಲೆಗಳಲ್ಲಿ ಈ `ಸುರಕ್ಷತಾ ಕ್ರಮ’ಗಳನ್ನು ಪಾಲಿಸುವಂತೆ ‘ಶಿಕ್ಷಣ ಇಲಾಖೆ’ ಆದೇಶ.!
ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸುರಕ್ಷತೆಗಾಗಿ ಕೈಗೊಳ್ಳಬೇಕಾದ ಶಾಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಕುರಿತು ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.
ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಮಾನ್ಯ ಸರ್ಕಾರದ ನಿರ್ದೇಶನದಂತೆ, ದಸರಾ ರಜೆ ಮುಗಿದು ಶಾಲೆಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಅನಿರೀಕ್ಷಿತವಾಗಿ ಮಳೆ ಬರುವ ಸಾಧ್ಯತೆ ಇರುವದರಿಂದ ಹಾಗೂ ಪ್ರಸ್ತುತವಾಗಿ ಅನಿರೀಕ್ಷಿತವಾಗಿ ಮಳೆ ಸುರಿಯುತ್ತಿರುವ ಕಾರಣ ಶಾಲಾ ಶಿಕ್ಷಕರು/ಮುಖ್ಯಶಿಕ್ಷಕರು, ಸಿಆರ್.ಪಿ/ಬಿಆರ್.ಪಿ/ಇಸಿಓ/ಬಿ.ಆರ್.ಸಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರು, ಶಾಲೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ತೊಂದರೆಯಾಗದಂತೆ ಮತ್ತು ಯಾವುದೇ ಅವಘಡಗಳು ಸಂಭವಿಸದಂತೆ ಮುತುವರ್ಜಿ ವಹಿಸಲು ಹಾಗೂ ಉಪನಿರ್ದೇಶಕರು (ಆಡಳಿತ) ಇವರು ಈ ಕೆಳಗಿನ ಎಲ್ಲಾ ಸುರಕ್ಷತಾ ಅಂಶಗಳನ್ನು ಸಂಬಂಧಪಟ್ಟ ಎಲ್ಲಾ ಅನುಷ್ಟಾನಾಧಿಕಾರಿಗಳಿಂದ ಪರಿಶೀಲನಾ ವರದಿಯನ್ನು ಪಡೆದುಕೊಂಡು ಶಾಲೆಗಳನ್ನು ಪುನರಾರಂಭಿಸಲು ಕ್ರಮ ಕೈಗೊಳ್ಳುವದು.
1. ಶಾಲೆಯಲ್ಲಿರುವ ಪ್ರತಿ ತರಗತಿ ಕೊಠಡಿಗಳು ಹಾಗೂ ಇತರೆ ಕೊಠಡಿಗಳನ್ನು ಸುಸ್ಥಿತಿಯಲ್ಲಿಡುವುದು. ಮತ್ತು ಸಂಬಂಧ ಪಟ್ಟ ಮುಖ್ಯ ಶಿಕ್ಷಕರಿಂದ ದೃಢೀಕರಣವನ್ನು ಪಡೆದುಕೊಳ್ಳುವದು.
2. ಶಾಲೆಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗುವಂತೆ ಎಲ್ಲಾ ವರ್ಗ ಕೋಣೆಗಳನ್ನು ಹಾಗೂ ಶಾಲಾ ಅವರಣವನ್ನು ಸ್ವಚ್ಚಗೊಳಿಸಬೇಕು. ಸ್ವಚ್ಚಗೊಳಿಸಿದ ಬಗ್ಗೆ ಜಿಯೋ ಟ್ಯಾಗ್ ಫೋಟೊ ವರದಿಯನ್ನು ಪಡೆದುಕೊಳ್ಳುವದು.
3. ಶಾಲೆಯ ಅಡುಗೆ ಕೊಠಡಿಗಳ ನೈರ್ಮಲ್ಯ ಮತ್ತು ಸ್ವಚ್ಚತೆ ಬಗ್ಗೆ ಎಸ್.ಓ.ಪಿ ಪ್ರಕಾರ ಕ್ರಮ ವಹಿಸುವದು. ಆಹಾರ ಧಾನ್ಯಗಳು ಬಳಕೆಗೆ ಯೋಗ್ಯವಾಗಿವಿರುತ್ತವೆಯೇ ಎಂಬುದರ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಮತ್ತು ಮುಖ್ಯ ಶಿಕ್ಷಕರಿಂದ ದೃಢೀಕರಣವನ್ನು ಪಡೆಯಬೇಕು. ಆಹಾರ ಧಾನ್ಯಗಳನ್ನು ಸುರಕ್ಷಿತವಾಗಿ ಕಂಟೇನರ್‌ಗಳಲ್ಲಿ ಸಂಗ್ರಹಿಸಿ ಇಡಬೇಕು. ಹಲ್ಲಿ, ಹುಳುಗಳು ಇರದಂತೆ ನೋಡಿಕೊಳ್ಳಬೇಕು.
4. ಅಡುಗೆ ತಯಾರಿಸಲು ಮತ್ತು ಕುಡಿಯಲು ಬಳಸುವ ನೀರಿನ ಸುರಕ್ಷತೆ ಅತ್ಯಂತ ಮಹತ್ವವಾಗಿದೆ. ನೀರಿನ ಟ್ಯಾಂಕ್‌ಗಳನ್ನು ಸ್ವಚ್ಚಗೊಳಿಸಬೇಕು. ಮತ್ತು ಸ್ವಚ್ಚಗೊಳಿಸದ ನಂತರವೇ ಮಕ್ಕಳಿಗೆ ಕುಡಿಯಲು ಹಾಗೂ ಬಳಕೆ ಮಾಡಲು ನೀಡಬೇಕು. ನೀರಿನ ಟ್ಯಾಂಕ್ನನ್ನು ಲಭ್ಯವಿರುವ ಕೊಠಡಿ ಒಳಗೆ ಸುರಕ್ಷಿತವಾಗಿ ಇಡಲು ಕ್ರಮಕೈಗೊಳ್ಳಬೇಕು. ಮತ್ತು ಪ್ರತಿ ನಿತ್ಯ ಕುಡಿಯುವ ನೀರಿನ ಟ್ಯಾಂಕ್‌ನ್ನು ಪರಿಶೀಲಿಸಿ ಮಕ್ಕಳಿಗೆ ಕುಡಿಯಲು ನೀಡಬೇಕು. ಸಾಧ್ಯವಾದಷ್ಟು ವಾಟರ್ ಫಿಲ್ಟರ್‌ನ್ನು ಅಳವಡಿಸಲು ಕ್ರಮವಹಿಸಬೇಕು. ಶಾಲೆಯಲ್ಲಿ ಕುಡಿಯಲು ಬಳಸುವ ನೀರು ಸುರಕ್ಷತೆಯಿಂದ ಇದ್ದ ಬಗ್ಗೆ ಮುಖ್ಯ ಶಿಕ್ಷಕರಿಂದ ದೃಢೀಕರಣವನ್ನು ಪಡೆಯುವುದು.
ಶಾಲೆಯ ಮೇಜರ ದುರಸ್ಥಿ ಅವಶ್ಯಕತೆ ಇರುವ ತರಗತಿ ಕೊಠಡಿಗಳನ್ನು ಬಳಸದೆ ಪರ್ಯಾಯ ಕೊಠಡಿಗಳಲ್ಲಿ ತರಗತಿ ವ್ಯವಸ್ಥೆ ಮಾಡಿಕೊಳ್ಳುವುದು. ಮತ್ತು ಅಂತಹ ಕೊಠಡಿಗಳಿಗೆ ಬೀಗ ಹಾಕಿ ವಿದ್ಯಾರ್ಥಿಗಳು ಅವುಗಳ ಹತ್ತಿರ ತೆರಳದಂತೆ ಗಮನಹರಿಸುವುದು.
5. ಮುಖ್ಯವಾಗಿ ಅನಿರಿಕ್ಷಿತವಾಗಿ ಬರುವ ಗಾಳಿ ಮಳೆಯಿಂದ ಎದುರಾಗುವ ಅಪಾಯಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಆ ಸಂದರ್ಭದಲ್ಲಿ ಮಳೆಯು ನಿಲ್ಲುವವರೆಗೆ ಮಕ್ಕಳನ್ನು ಶಾಲಾ ಕೊಠಡಿಯಲ್ಲಿಯೆ ಕೂಡಿಸಬೇಕು. ಮಳೆ ನಿಂತ ನಂತರ ಮಕ್ಕಳನ್ನು ಮನೆಗೆ ಕಳುಹಿಸುವುದು. ವಿದ್ಯಾರ್ಥಿಗಳು ಮನೆಗೆ ಹೋಗುವ ದಾರಿಯಲ್ಲಿ ಹಳ್ಳ ಕೊಳ್ಳಗಳಿದ್ದು, ಅವುಗಳು ತುಂಬಿಹರಿಯುತ್ತಿರುವ ಸಾಧ್ಯತೆಯಿದ್ದರೆ, ಅವರ ಪಾಲಕರಿಗೆ ಕರೆ ಮಾಡಿ ತಿಳಿಸಿ ಪಾಲಕರೊಂದಿಗೆ ಮಕ್ಕಳನ್ನು ಮನೆಗೆ ಕಳುಹಿಸುವುದು.
6. ಶಾಲೆಯ ಮೇಜರ ದುರಸ್ಥಿ ಅವಶ್ಯಕತೆ ಇರುವ ತರಗತಿ ಕೊಠಡಿಗಳನ್ನು ಬಳಸದೆ ಪರ್ಯಾಯ ಕೊಠಡಿಗಳಲ್ಲಿ ತರಗತಿ ವ್ಯವಸ್ಥೆ ಮಾಡಿಕೊಳ್ಳುವುದು. ಮತ್ತು ಅಂತಹ ಕೊಠಡಿಗಳಿಗೆ ಬೀಗ ಹಾಕಿ ವಿದ್ಯಾರ್ಥಿಗಳು ಅವುಗಳ ಹತ್ತಿರ ತೆರಳದಂತೆ ಗಮನಹರಿಸುವುದು.
7. ಕೊಠಡಿ/ಕಾರಿಡಾರಗಳ ಮೇಲ್ಟಾವಣಿಗಳ ಸಿಮೆಂಟ್ ಉದರಿ ಬಿಳುತ್ತಿದ್ದರೆ, ಆ ಭಾಗದಲ್ಲಿ ವಿದ್ಯಾರ್ಥಿಗಳು ಹೋಗದಂತೆ ಕ್ರಮವಹಿಸಿ ತಕ್ಷಣವೇ ಅದನ್ನು ದುರಸ್ಥಿಗೊಳಿಸುವುದು.
8. ಶಾಲಾ ಕಟ್ಟಡದ ಮೇಲೆ ಮಳೆಯ ನೀರು ನಿಲ್ಲದಂತೆ ಸರಾಗವಾಗಿ ನೀರು ಹರಿದು ಹೋಗುವಂತೆ ಕ್ರಮವಹಿಸುವುದು.
9. ಶಾಲೆಯ ಸಮೀಪ ತಗ್ಗುಗಳಿದ್ದಲ್ಲಿ ಮುಚ್ಚಿಸಲು, ಕೆರೆಕಟ್ಟೆಗಳಿದ್ದರೆ, ಅವುಗಳ ಸುತ್ತಲೂ ತಂತಿ ಬೇಲಿ ಹಾಕಿಸಲು ಸ್ಥಳಿಯ ಸಂಸ್ಥೆಗಳ ಸಹಕಾರ ಪಡೆಯುವುದು.
10. ನದಿ, ಕೆರೆ, ಕಾಲುವೆ, ನೀರಿನ ಹೊಂಡಗಳ ಹತ್ತಿರ ತೆರಳದಂತೆ ವಿದ್ಯಾರ್ಥಿಗಳಿಗೆ ಅವುಗಳಿಂದಾಗುವ ಅಪಾಯಗಳ ಕುರಿತು ಮನವರಿಕೆ ಮಾಡಿ ಕೊಡುವುದು ಹಾಗೂ ಅವರಲ್ಲಿ ಜಾಗೃತಿ ಮೂಡಿಸುವದು.
11. ಶಾಲಾ ಅವರಣದಲ್ಲಿ ತೆರೆದ ತೊಟ್ಟಿಗಳು, ನೀರಿನ ಟ್ಯಾಂಕ್‌ಗಳನ್ನು ಮುಚ್ಚುವುದು.
12. ತೀವೃ ಶಿಥಿಲಗೊಂಡ ಕೊಠಡಿಗಳನ್ನು ನೆಲಸಮಗೊಳಿಸಲು ಪಿ.ಡಬ್ಲ್ಯು.ಡಿ / ಪಿ.ಆರ್.ಇ.ಡಿ ಯಿಂದ ಅನುಮತಿ ಪಡೆದು ತೆರವುಗೊಳಿಸುವದು.
13. ಶಾಲಾ ಅವರಣದಲ್ಲಿ ವಿದ್ಯುತ್ ಕಂಬಗಳಿದ್ದರೆ, ವಿದ್ಯುತ್ ತಂತಿಗಳು ಹಾಯ್ದು ಹೋಗಿದ್ದರೆ, ಅವುಗಳನ್ನು ಸ್ಥಳಾಂತರಿಸಲು ಸಂಬಂಧಿಸಿದ ಇಲಾಖೆಗೆ ಪತ್ರ ಬರೆದು ಅಗತ್ಯ ಕ್ರಮ ವಹಿಸುವುದು.
14. ಶಾಲೆಯಲ್ಲಿನ ವಿದ್ಯುತ್ ತಂತಿಗಳು ಮತ್ತು ವಿದ್ಯುತ್ ಸ್ವೀಚ್‌ಗಳು ವಿದ್ಯಾರ್ಥಿಗಳ ಕೈಗೆ ನಿಲುಕದಂತೆ ಇರಬೇಕು. ಶಾಲೆಯಲ್ಲಿನ ವಿದ್ಯುತ್ ಉಪಕರಣಗಳನ್ನು ಪರಿಕ್ಷಿಸಬೇಕು.
15. ಶಾಲಾ ಅವರಣದಲ್ಲಿ ಹಳೆಯ ಗಿಡ ಮರಗಳಿದ್ದರೆ, ಅವುಗಳನ್ನು ತೆಗೆದು ಹಾಕಲು ಕ್ರಮವಹಿಸುವದು. ದೊಡ್ಡ
ಮರಗಳ ರೆಂಬೆ ಕೊಂಬೆಗಳನ್ನು ಮತ್ತು ತೆಂಗಿನ ಮರಗಳಿದ್ದರೆ ಒಣಗಿದ ಗರಿಗಳನ್ನು, ಕಾಯಿಗಳನ್ನು ತೆಗೆಯಲು ಅಗತ್ಯ ಕ್ರಮ ವಹಿಸುವದು. ಆ ಮರಗಳ ಹತ್ತಿರ ತೆರಳದಂತೆ ಬೇಲಿ ನಿರ್ಮಿಸುವುದು.
16. ಶಾಲಾ ಅವರಣದಲ್ಲಿ ಹಾಗೂ ಸುತ್ತಲೂ ಹುಲ್ಲು ಮತ್ತು ಮುಳ್ಳಿನ ಪೊದೆಗಳು ಬೆಳೆಯದಂತೆ ಹಾಗೂ ಅವುಗಳಲ್ಲಿ ಅಪಾಯಕಾರಿ ಸರಿಸೃಪಗಳು ಸೇರದಂತೆ ಮುನ್ನೆಚ್ಚರಿಕೆ ಕ್ರಮ ವಹಿಸುವುದು.
17. ಶಾಲಾ ಅವರಣದಲ್ಲಿ ವಿವಿಧ ರೀತಿಯ ಸಿವಿಲ್ ಕಾಮಗಾರಿಗಳು ನಡೆಯುತ್ತಿದ್ದರೆ, ಅಂತಹ ಸ್ಥಳದ ಹತ್ತಿರ ಮಕ್ಕಳು ಯಾವುದೇ ಸಮಯದಲ್ಲಿ ಸುಳಿಯದಂತೆ, ಕಾಮಗಾರಿಗೆ ಬಳಸುವ ಸಾಮಾಗ್ರಿ ಜೊತೆ ಅಟವಾಡದಂತೆ ಗಮನಹರಿಸುವುದು. ಕಾಮಗಾರಿ ಸ್ಥಳದ ಸುತ್ತಲೂ ಬ್ಯಾರಿಕೇಡ್ ನಿರ್ಮಿಸಲು ಕ್ರಮ ವಹಿಸುವದು.
18. ಶಾಲೆಯಲ್ಲಿ ಮುರಿದ ಡೆಸ್ಕಗಳ ಅಂಚುಗಳು ತೀವ್ರವಾಗಿ ಚೂಪಾಗಿರುವದರಿಂದ ಅವುಗಳನ್ನು ಬಳಸಬಾರದು.
19. ಖಾಸಗಿ ಶಾಲೆಗಳ ವಾಹನಗಳ ಸುರಕ್ಷತಾ ಬಗ್ಗೆ ಗಮನ ಹರಿಸುವುದು. ವಾಹನವು ಸುಸ್ಥಿತಿಯಲ್ಲಿರಬೇಕು. ಪರವಾನಿಗೆ ಪಡೆದ ಚಾಲಕರನ್ನು ನೇಮಿಸುವುದು. ನಿಗದಿ ಪಡಿಸಿದ ಸಂಖ್ಯೆಗಿಂತ ಹೆಚ್ಚಿಗೆ ಮಕಳನ್ನು ವಾಹನದಲ್ಲಿ ಕೂಡಿಸಬಾರದು. ಕಡ್ಡಾಯವಾಗಿ ಮಾನ್ಯ ಸುಪ್ರೀಂ ಕೋರ್ಟ ಆದೇಶದಂತೆ ಸುರಕ್ಷತಾ ಕ್ರಮಗಳನ್ನು ಪಾಲಿಸುವ ಕುರಿತಾಗಿ ಸಂಬಂಧಿಸಿದವರಿಂದ ದೃಢೀಕರಣವನ್ನು ಪಡೆಯುವುದು.