ಬೆಳಗಾವಿ : ಅಥಣಿ ತಾಲೂಕಿನ ಜನರು ರಮೇಶ್ ಜಾರಕಿಹೊಳಿ ಅವರನ್ನು ಬಹುದಿನಗಳಿಂದ ತಿರಸ್ಕಾರ ಮಾಡಿದ್ದಾರೆ. ಅವರಿಗೆ ಅದರ ಅರಿವು ಇನ್ನೂ ಆಗಿಲ್ಲ. ಅವರಿಗೆ ಮಾನ, ಮರ್ಯಾದೆ ಎನ್ನುವುದು ಗೊತ್ತಿದ್ದರೆ ನಮ್ಮ ತಾಲೂಕಿಗೆ ಕಾಲಿಡಬಾರದು. ಎಂದು ಶಾಸಕ ಲಕ್ಷ್ಮಣ ಸವದಿ ಆಕ್ರೋಶ ಹೊರಹಾಕಿದರು.
ತಮ್ಮ ಕುರಿತು ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನನ್ನಲ್ಲೂ ಸಾಕಷ್ಟು ಶಬ್ಧಕೋಶಗಳಿವೆ, ನಿಮ್ಮ ರೀತಿ ನಾನೂ ಮಾತನಾಡಿದರೆ ಜನರು ನನಗೂ ಸಹ ಮೆಂಟಲ್ ಎಂದು ಕರೆಯುತ್ತಾರೆ. ಹಾಗೆ ಆಗಬಾರದು ಎಂದು ಸೂಕ್ಷ್ಮತೆಯಿಂದಲೇ ಕೆಲವು ಉತ್ತರ ನೀಡುತ್ತಿದ್ದೇನೆ. ನಿಮಗೆ ಮಾನ, ಮರ್ಯಾದೆ ಎನ್ನುವುದು ಗೊತ್ತಿದ್ದರೆ ನಮ್ಮ ತಾಲೂಕಿಗೆ ಕಾಲಿಡಬಾರದು ಎಂದು ಕಿಡಿ ಕಾರಿದ್ದಾರೆ.
ಜಾಣರು, ಬುದ್ಧಿಜೀವಿಗಳು ಇರುವವರಿಗೆ ಈ ಎಲ್ಲ ಸೂಕ್ಷ್ಮತೆಗಳು ಅರ್ಥವಾಗುತ್ತವೆ. ಆ ಸೂಕ್ಷ್ಮತೆ ಇಲ್ಲದ ಜನರಿಗೆ ಇವುಗಳ ಅರಿವು ಇರುವುದಿಲ್ಲ. ದಡ್ಡ ಅವನಿಗೆ ತನ್ನ ಹಾಗೂ ಇನ್ನೊಬ್ಬರ ಗೌರವದ ಅರ್ಥವೇ ಗೊತ್ತಿಲ್ಲ. ಮನುಷ್ಯನಿಗೆ ಜೀವನದಲ್ಲಿ ಸಂಸ್ಕಾರ ಗೊತ್ತಿರಬೇಕು. ಅದು ಇಲ್ಲವಾದಾಗ ಈ ರೀತಿಯ ಮಾತುಗಳು ಬರುತ್ತವೆ ಎಂದು ಜಾರಕಿಹೊಳಿ ವಿರುದ್ಧ ಏಕ ವಚನದಲ್ಲೇ ವಾಗ್ದಾಳಿ ನಡೆಸಿದರು.