ಹಾಸನ : ಐತಿಹಾಸಿಕ ಹಾಸನಾಂಬೆ ದರ್ಶನಕ್ಕೆ ಇದೀಗ ಸಾರ್ವಜನಿಕ ದರ್ಶನಕ್ಕೆ ಅಧಿಕೃತವಾಗಿ ಇತರೆ ಬೀಳಲಿದೆ ಈಗಾಗಲೇ ಗೇಟ್ಗಳನ್ನು ಎಲ್ಲಾ ಕ್ಲೋಸ್ ಮಾಡಲಾಗಿದ್ದು ಕೊನೆಯ ಹಂತದಲ್ಲಿ ಓಡೋಡಿ ಬಂದು ಭಕ್ತರು ದರ್ಶನ ಪಡೆದುಕೊಂಡರು.
ಕಳೆದ 13 ದಿನಗಳಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು ನಾಳೆ ಮಧ್ಯಾಹ್ನ 12 ಗಂಟೆಗೆ ದೇಗುಲದ ಗರ್ಭಗುಡಿ ಬಾಗಿಲು ಬಂದ ಆಗಲಿದೆ. ಕೊನೆ ದಿನವಾದ ಇಂದು ಲಕ್ಷಾಂತರ ಭಕ್ತರು ಹಾಸನಾಂಬೆ ದೇವಿಯ ದರ್ಶನ ಪಡೆದುಕೊಂಡರು. ಕಳೆದ 13 ದಿನಗಳಿಂದ ಇದುವರೆಗೂ 26 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದುಕೊಂಡಿದ್ದಾರೆ. ಅಲ್ಲದೆ ಈ ವರ್ಷ ದಾಖಲೆ 22 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದೆ.
ಪ್ರತಿ ವರ್ಷ ಒಂದು ಬಾರಿ ಮಾತ್ರ ಭಕ್ತರಿಗೆ ದರ್ಶನ ಕೊಡುವ ಈ ಒಂದು ಹಾಸನಾಂಬೆ ದೇವಿಯ ಪ್ರಾಮುಖ್ಯತೆ ಏನೆಂದರೆ, ನಾಳೆ ದೇಗುಲ ಬಂದ್ ಮಾಡಿದರೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗು ಹಚ್ಚಿದ ದೀಪ ಆರದೇ ಇರುತ್ತದೆ. ಅಲ್ಲದೆ ಹೂಗಳು ಸಹ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೂ ಬಾಡದೆ ಇರುವುದು ಈ ಒಂದು ದೇವಿಯ ಪವಾಡ ಅಂತಾನೆ ಹೇಳಬಹುದು. ಕಳೆದ 13 ದಿನಗಳಿಂದ ಅನೇಕ ರಾಜಕೀಯ ನಾಯಕರು ಸಿನಿಮಾ ತಾರೆಯರು ಸೇರಿದಂತೆ ದೇವರ ದರ್ಶನ ಪಡೆದಿದ್ದಾರೆ.