ಬೆಂಗಳೂರು : ರಾಜ್ಯ ಬಿಜೆಪಿ ನಾಯಕರಿಗೆ ಕೇಂದ್ರದ ಬಳಿ ಹೋಗಿ ರಾಜ್ಯಕ್ಕೆ ಪರಿಹಾರ ಕೊಡಿಸುವ ತಾಕತ್ತು ಇಲ್ಲ. NDA ಇಂದ ಗೆದ್ದ ರಾಜ್ಯದ 19 ಸಂಸದರು ಏನು ಇಂಡಿಯಾ ಗೇಟ್ ಕಾಯುತ್ತಿದ್ದಾರಾ? ಕೇಂದ್ರಕ್ಕೆ ಹೋಗಿ ರಾಜ್ಯಕ್ಕೆ ಬರುವ ಪರಿಹಾರವನ್ನು ಕೇಳಿ ಎಂದು ಶಾಸಕ ಪ್ರದೀಪ ಈಶ್ವರ ಬಿಜೆಪಿ ನಾಯಕರು ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರಕ್ಕೆ ರಾಜ್ಯದ ಮೇಲೆ ತುಂಬಾ ಕೋಪ ಇದೆ ಅಂತ ಅನಿಸುತ್ತದೆ. ಪ್ರವಾಹದಿಂದ ರಾಜ್ಯದಲ್ಲಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ. ನಾವು ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡುವಂತೆ ಕೇಳಿದ್ದೆವು. ಮಹಾರಾಷ್ಟ್ರಕ್ಕೆ 1556 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ಆದರೆ ಕರ್ನಾಟಕಕ್ಕೆ ಮಾತ್ರ 384 ಕೋಟಿ ರೂಪಾಯಿ ನೀಡಿದ್ದಾರೆ. ಇದೇ ದೊಡ್ಡ ಸಾಧನೆ ಅನ್ನುವ ರೀತಿಯಲ್ಲಿ ಆರ್ ಅಶೋಕ ಟ್ವೀಟ್ ಮಾಡಿದ್ದಾರೆ.
ಪರಿಹಾರದ ಬಗ್ಗೆ ಕೇಳಿದರೆ ಅಶೋಕ್ ನಮ್ಮನ್ನೆ ಕೇಳಲು ಹೇಳುತ್ತಾರೆ. ಎನ್.ಡಿ.ಎ ಇಂದ ಗೆದ್ದ 19 ಸಂಸದರು ಇಂಡಿಯಾ ಗೇಟ್ ಕಾಯುತ್ತಿದ್ದಾರಾ? ಕಾಂಗ್ರೆಸ್ಗೆ ಪರಿಹಾರ ಕೇಳುತ್ತಿಲ್ಲ ರಾಜ್ಯಕ್ಕೆ ಪರಿಹಾರ ಕೇಳುತ್ತಿದ್ದೇವೆ.ಉತ್ತರ ಕರ್ನಾಟಕದ ಜನರಿಗೆ ಬಿಜೆಪಿ ಮೋಸ ಮಾಡುತ್ತಿದೆ. ಬಿಜೆಪಿಗೆ ತಾಕತ್ತಿದ್ದರೆ ಕೇಂದ್ರದ ಬಳಿ ಹೋಗಿ ಪರಿಹಾರ ಕೊಡಿಸಲಿ.
ಉತ್ತರ ಕರ್ನಾಟಕದ ಫೈರ್ ಬ್ರಾಂಡ್ ಇಲಿಗಳು ಏಕೆ ಪರಿಹಾರ ಕೇಳುತ್ತಿಲ್ಲ? ಕರ್ನಾಟಕಕ್ಕೆ ಅನ್ಯಾಯ ಆದರೂ ಅವರಿಗೆ ಕೇಳುವ ಯೋಗ್ಯತೆ ಇಲ್ಲ. ಆರ್. ಅಶೋಕಗೆ ತಾಕತ್ತಿದ್ದರೆ ಕೇಂದ್ರ ಸರ್ಕಾರದ ಬಳಿ ಪರಿಹಾರ ಕೇಳಲಿ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ವಾಗ್ದಾಳಿ ನಡೆಸಿದರು.