ಬೆಂಗಳೂರು: ನಗರದಲ್ಲಿ ದೀಪಾವಳಿ ಆರಂಭದಲ್ಲೇ ಪಟಾಕಿ ಸಿಡಿತದಿಂದ ಅವಘಡ ಸಂಭವಿಸಿದೆ. ಪಟಾಕಿ ಸಿಡಿದು ಮಕ್ಕಳು ಸೇರಿದಂತೆ ಒಟ್ಟು 40 ಮಂದಿ ಗಾಯಗೊಂಡಿದ್ದಾರೆ.
ಬೆಂಗಳೂರಲ್ಲಿ ಬಿಜಿಲಿ ಪಟಾಕಿ ಸಿಡಿದು 11 ವರ್ಷದ ಬಾಲಕ ಗಾಯಗೊಂಡಿದ್ದಾನೆ. ಪಟಾಕಿ ಸಿಡಿಸುವುದನ್ನು ನೋಡುತ್ತಿದ್ದಾಗ ಮತ್ತೊಬ್ಬನಿಗೆ ಗಾಯವಾಗಿದೆ. ಆಟಂ ಬಾಂಬ್ ಪಟಾಕಿ ಸಿಡಿದು 48 ವರ್ಷದ ವ್ಯಕ್ತಿಯ ಕಣ್ಣಿಗೆ ಗಾಯವಾಗಿದೆ. ಅದೇ ರೀತಿಯಾಗಿ ಇನ್ನು 6 ಜನರಿಗೆ ಗಾಯಗಳಾಗಿದ್ದು, ಗಾಯಾಳುಗಳನ್ನು ನಾರಾಯಣ ನೇತ್ರಾಲಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 20 ಜನರು ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಒಟ್ಟು 20 ಪ್ರಕರಣಗಳು ದಾಖಲಾಗಿವೆ.
ಪಟಾಕಿ ಸಿಡಿಸಲು ಹೋಗಿ ಮಕ್ಕಳು ಗಾಯಗೊಂಡಿದ್ದಾರೆ. ಪಟಾಕಿಯಿಂದ ಅನಾಹುತ ಸಂಭವಿಸಿದ ಪರಿಣಾಮ ಮಿಂಟೋ ಆಸ್ಪತ್ರೆಯಲ್ಲಿ 13 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ.