ಚಿಕ್ಕಬಳ್ಳಾಪುರ: ಮೈದುನನ ಜೊತೆಗೆ ಮಲಗೋಕೆ ಪತಿ ಒತ್ತಾಯಿಸುತ್ತಿದ್ದರು. ಅಲ್ಲದೇ ವರದಕ್ಷಿಣೆಗಾಗಿ ಚಿತ್ರಹಿಂಸೆ ನೀಡುತ್ತಿದ್ದರು ಎಂಬುದಾಗಿ ಆರೋಪಿಸಿ ಗೃಹಿಣಿಯೊಬ್ಬಳು ವೀಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಸೋತೇನಹಳ್ಳಿ ಗ್ರಾಮ ಉಪನ್ಯಾಸಕಿ ಪುಷ್ಪ(23) ಎಂಬುವರೇ ಆತ್ಮಹತ್ಯೆಗೆ ಶರಣಾದಂತ ಗೃಹಿಣಿಯಾಗಿದ್ದಾರೆ. ಈಕೆಯನ್ನು ತಪಸೀಹಳ್ಳಿ ಗ್ರಾಮ ವೇಣು ಎಂಬುವರಿಗೆ ಕಳೆದ ಒಂದೂವರೆ ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು. ವಿವಾಹದ ಬಳಿಕ ವರದಕ್ಷಿಣೆ ಹಾಗೂ ನಿಶೇಷನಕ್ಕಾಗಿ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರಂತೆ.
ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದಂತ ಪುಷ್ಪ, ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಬಳಿಯಲ್ಲಿ ಇರುವಂತ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂನಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರು ಸಾವಿಗೆ ಮುನ್ನ ಸುಮಾರು 8 ನಿಮಿಷಗಳ ಕಾಲದ ವೀಡಿಯೋ ಮಾಡಿದ್ದಾರೆ.
ಪುಷ್ಪ ಸಾಯುವ ಮುನ್ನ ಮಾಡಿದಂತ ವೀಡಿಯೋದಲ್ಲಿ ಪತಿ ವೇಣು, ಅತ್ತೆ, ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೇ ಬೇರೆ ಮದುವೆಯಾಗಲು ಪತಿ ವೇಣು ಪ್ಲಾನ್ ಮಾಡಿದ್ದ ಕಾರಣ ನನಗೆ ಊಟದಲ್ಲಿ ವಿಷ ಹಾಕಿ ಕೊಲ್ಲೋದಕ್ಕೂ ಸಂಚು ರೂಪಿಸಿದ್ದರು ಎಂಬುದಾಗಿ ಆರೋಪಿಸಿದ್ದಾರೆ.
ಇದಷ್ಟೇ ಅಲ್ಲದೇ ಶಾಕಿಂಗ್ ಎನ್ನುವಂತೆ ತನ್ನ ಗಂಡನೇ ಮೈದೂನ ನಾರಾಯಣ ಸ್ವಾಮಿ ಜೊತೆಗೆ ಮಲಗುವಂತೆ ಬಲವಂತ ಮಾಡುತ್ತಿದ್ದರು. ನನ್ನ ಸಾವಿಗೆ ಗಂಡ ವೇಣು, ಅತ್ತೆ ಭಾರತಿ, ಮಾವ ಗೋವಿಂದಪ್ಪ, ಮೈದುನ ನಾರಾಯಣಸ್ವಾಮಿ, ಸಂಬಂಧಿಕರಾದಂತ ಮುತ್ತೇಗೌಡ, ಪಲ್ಲವಿ ಅವರೇ ಕಾರಣ. ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿಸಿದ್ದರು.
ಈ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಪೊಲೀಸರು ಪುಷ್ಪ ಅವರ ಪತಿ ವೇಣು, ಮಾವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ರೈತರೇ ಪಿಎಂ ಕಿಸಾನ್ 21ನೇ ಕಂತಿನ ಹಣ ಪಡೆಯಲು ಈ ಕೆಲಸ ಮಾಡೋದು ಕಡ್ಡಾಯ | PM Kisan Updates
ಶೀಘ್ರವೇ PM Kisan 21ನೇ ಕಂತು ರೈತರ ಖಾತೆಗೆ ಜಮಾ: ನಿಮ್ಮ ಹೆಸರು ಇದ್ಯಾ ಅಂತ ಹೀಗೆ ಚೆಕ್ ಮಾಡಿ | PM Kisan Scheme