ಹುಬ್ಬಳ್ಳಿ : ಕಳೆದ ಅಕ್ಟೋಬರ್ 13 ರಂದು ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದ ಶಾಸಕರು ಸಚಿವರಿಗೆ ಡಿನ್ನರ್ ಪಾರ್ಟಿ ಕರೆದಿದ್ದರು. ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗಿಗೆ ಕರೆದು ಯಾಕೆ ಗೊತ್ತಾ? ಪ್ರತಿ ಸೇವೆಗೆ ರೇಟ್ ಫಿಕ್ಸ್ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ದಾರೆ ಎಂದು ಹುಬ್ಬಳ್ಳಿಯಲ್ಲಿ ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಗಂಭೀರವಾಗಿ ಆರೋಪಿಸಿದರು.
ಒಬ್ಬೊಬ್ಬ ಸಚಿವರನ್ನು ಪ್ರತ್ಯೇಕವಾಗಿ ಕರೆದು ರೇಟ್ ಫಿಕ್ಸ್ ಮಾಡಿದ್ದಾರೆ. ಯಾರು ಎಷ್ಟು ಕೊಡಬೇಕು ಅಂತ ಸಿಎಂ ಸಿದ್ದರಾಮಯ್ಯ ರೇಟ್ ಫಿಕ್ಸ್ ಮಾಡಿದ್ದಾರೆ. ಹೈಕಮಾಂಡ್ ಪಾಲಿಗೆ ಕರ್ನಾಟಕ ಕಾಂಗ್ರೆಸ್ ಎಟಿಎಂ ಆಗಿದೆ. ಬಿಡಿಎ, ಜಿಬಿಎ ವ್ಯಾಪ್ತಿಯ ಸೇವೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ಪ್ರತಿ ಇಲಾಖೆಗೆ ರೇಟ್ ಫಿಕ್ಸ್ ಮಾಡಿದ್ದಾರೆ. ತನಿಖೆ ನಡೆಸಿದರೆ ಯಾರ ಪಾಲು ಎಷ್ಟಿದೆ ಅನ್ನೋದು ಗೊತ್ತಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಸಂಸದ ಜಗದೀಶ ಶೆಟ್ಟರ್ ಆರೋಪಿಸಿದರು.
ಆರ್ ಎಸ್ ಎಸ್ ಚಟುವಟಿಕೆಯಲ್ಲಿ ಸರ್ಕಾರಿ ನೌಕರರಿಗೆ ಭಾಗಿಯಾಗಲು ಕಡಿವಾಣ ಹಾಕಿದ ವಿಚಾರವಾಗಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾನೂನು ಜ್ಞಾನ ಇಲ್ಲವ ಸಿದ್ದರಾಮಯ್ಯನವರೇ ನಿಮ್ಮ ಕಾನೂನು ಪದವಿಗೆ ಬೆಂಕಿ ಹಚ್ಚಿ. ಸಚಿವ ಪ್ರಿಯಾಂಕ ಖರ್ಗೆ ನಿಮಗೆ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರವೇ ಎಲ್ಲಾ ನೌಕರರಿಗೆ ಅವಕಾಶ ನೀಡಿದೆ.ಸರಕಾರಿ ನೌಕರರು ಆರ್ ಎಸ್ ಎಸ್ ಚಟುವಟಿಕೆಗಳಲ್ಲಿ ಭಾಗಿಯಾಗಲು ನಿಯಮವಿದೆ.
ನೀವು ಯಾವುದೇ ಕಾನೂನು ಇಲ್ಲದೆ ವಿಡಿಯೋ ಅವರನ್ನು ಅಮಾನತು ಮಾಡುತ್ತೀರಿ? ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಲು ಸಂಪುಟದಲ್ಲಿ ಯಾಕೆ ನಿರ್ಧರಿಸಿಲ್ಲ. ಈ ರೀತಿ ಕಾನೂನು ತರಲು ಹೋದರೆ ಏನು ಆಗಲ್ಲ ಅಂತ ನಿಮಗೆ ಗೊತ್ತಿದೆ. ಎಲ್ಲಾ ಗೊತ್ತಿದ್ದು ಈ ರೀತಿ ಆರ್ಎಸ್ಎಸ್ ಹೆಸರು ಕೆಡಿಸಲು ಕೆಲಸ ಮಾಡುತ್ತಿದ್ದೀರಿ ಎಂದು ಸಂಸದ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.