ಬೆಂಗಳೂರು : ವೇತನ ನೀಡದ ಹಿನ್ನೆಲೆ, ಬೆಂಗಳೂರಿನಲ್ಲಿ ಓಲಾ ಕಂಪನಿಯ ಸಿಬ್ಬಂದಿ ಆತ್ಮಹತ್ಯೆಗೆ ಶರಣಾಗಿದ್ದು ಸಿಇಓ ವಿರುದ್ಧ FIR ದಾಖಲಾಗಿದೆ. ಕಂಪನಿಯ ಇಂಜಿನಿಯರ್ ಆಗಿದ್ದ ಕೆ ಅರವಿಂದ್ ಎಂಬ ವ್ಯಕ್ತಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಭತ್ಯೆ ಹಾಗೂ ವೇತನ ನೀಡದೆ ಕಿರುಕುಳ ನೀಡಿರುವ ಆರೋಪದ ಮೇರೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಓಲಾ ಸಂಸ್ಥೆಯ ಸಿಇಒ ಭವೇಶ್ ಅಗರ್ವಾಲ್ ಮತ್ತು ಹಿರಿಯ ಸಿಬ್ಬಂದಿ ಸುಬ್ರತ್ ಕುಮಾರ್ ದಾಸ್ ವಿರುದ್ಧ ಇದೀಗ ಸುಬ್ರಮಣಿಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ಕೆ ಅರವಿಂದ್ ಆತ್ಮಹತ್ಯೆ ಮಾಡಿಕೊಂಡ ಎರಡು ದಿನಗಳ ನಂತರ ಅಕೌಂಟಿಗೆ ಹಣ ಬಂದೆಡೆ. 30ನೇ ತಾರೀಕು 17 ಲಕ್ಷ 46 ಸಾವಿರ ಹಣ ಅಕೌಂಟಿಗೆ ಬಂದಿತ್ತು.
ಕಂಪನಿಯಿಂದ ಅರವಿಂದ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದರು. ಅನುಮಾನದಿಂದ ಕುಟುಂಬ ಕಂಪನಿ ಅವರನ್ನು ಪ್ರಶ್ನೆ ಮಾಡಿದ್ದಾರೆ. ಸುಮಾರು 28 ಪುಟಗಳ ಡೆತ್ ನೋಟ್ ಬರೆದಿದ್ದರು ಬಳಿಕ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಂಪನಿಯ ಹೋಮೋಲೋಗೇಶನ್ ಇಂಜಿನಿಯರಿಂಗ್ ವಿಭಾಗದಲ್ಲಿ ಕೆ ಅರವಿಂದ್ ಕಾರ್ಯನಿರ್ವಹಿಸುತ್ತಿದ್ದರು.