ಕಲಬುರ್ಗಿ : ಕಲ್ಬುರ್ಗಿ ಜಿಲ್ಲೆಯ ಚಿತಾಪುರದಲ್ಲಿ ಆರ್ಎಸ್ಎಸ್ ಸಂಚಲನಕ್ಕೆ ನಿರಾಕರಣೆ ಹಿನ್ನೆಲೆಯಲ್ಲಿ, ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿತು. ಈ ವೇಳೆ ಕಲ್ಬುರ್ಗಿ ಹೈಕೋರ್ಟ್ ಅರ್ಜಿದಾರರಿಗೆ ಮತ್ತೊಂದು ಅರ್ಜಿ ಸಲ್ಲಿಸಲು ಸೂಚನೆ ನೀಡಿತ್ತು. ನವೆಂಬರ್ 2 ರಂದು ಕಲ್ಬುರ್ಗಿ ಜಿಲ್ಲೆಯ ಚಿತಾಪುರದಲ್ಲಿ ಪಥಸಂಚಲನ ವಿಚಾರವಾಗಿ ಇದೀಗ ಕಲ್ಬುರ್ಗಿ ಹೈಕೋರ್ಟ್ ಪೀಠದ ಸೂಚನೆಯಂತೆ ಮುಖಂಡರು ಕಲ್ಬುರ್ಗಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹೌದು ನಿನ್ನೆ ಹೊಸ ಅರ್ಜಿ ಸಲ್ಲಿಕೆಗೆ ಆರ್ ಎಸ್ ಎಸ್ ಮುಖಂಡರು ಮುಂದಾಗಿದ್ದರು.ನಿನ್ನೆ ಡಿಸಿ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಲು ಮುಂದಾಗಿದ್ದಾಗ ಮನವಿ ಪತ್ರ ಖುದ್ದಾಗಿ ನೀಡಲು ಜಿಲ್ಲಾಧಿಕಾರಿ ಕಚೇರಿ ಮತ್ತು ನಿವಾಸಕ್ಕೆ ತೆರಳಿದ್ದರು ಡಿಸಿ ಸಿಗದ ಹಿನ್ನೆಲೆಯಲ್ಲಿ ಸರ್ಕಾರಿ ನಿವಾಸದ ಸಿಬ್ಬಂದಿಗಳಿಂದ ಫೋನ್ ಮಾಡಿದ್ದಾರೆ. ಜಿಲ್ಲಾಧಿಕಾರಿ ಆಪ್ತ ಸಹಾಯಕರಿಗೆ ಫೋನ್ ಮಾಡಿಸಿದ್ದಾರೆ.
ಆಪ್ತ ಸಹಾಯಕರು ಕೂಡ ಫೋನ್ ಕರೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರ ಅಧಿಕೃತ ಎರಡು ಇ-ಮೇಲ್ ಗೆ ಪತ್ರ ರವಾನಿಸಿದ್ದಾರೆ. ಪಥ ಸಂಚಲನಕ್ಕೆ ಅನುಮತಿ ನೀಡುವಂತೆ ಕೋರಿ ಪತ್ರ ರವಾನೆ ಮಾಡಿದ್ದಾರೆ ಜೊತೆಗೆ ಜಿಲ್ಲಾಧಿಕಾರಿ ಸರ್ಕಾರಿ ದೂರವಾಣಿ ಸಂಖ್ಯೆಗೂ ಮೆಸೇಜ್ ಮಾಡಿದ್ದಾರೆ. ವಾಟ್ಸಪ್ ಮೂಲಕ ಅನುಮತಿ ಕೋರಿ ಪತ್ರ ಕಳಿಸಿದ್ದಾರೆ. ಹೈಕೋರ್ಟ್ ಸೂಚನೆ ಅಂತೇ ಅನುಮತಿ ಪತ್ರ ಸಲ್ಲಿಸಿ ಮನವಿ ಮಾಡಿದ್ದಾರೆ.