ಶಿವಮೊಗ್ಗ: ಮಕ್ಕಳ ದೈಹಿಕ ಶಕ್ತಿ ಹೆಚ್ಚಲು ಹಾಗೂ ಚುರುಕುತನ ಅಳವಡಿಸಿಕೊಳ್ಳಲು ಈಜು ಪೂರಕವಾಗಿದೆ. ಈಜು ಕಲಿಯುವುದರಿಂದ ಹೆಚ್ಚು ಅನುಕೂಲವಿದೆ ಎಂದು ಸಾಗರ ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ತಿಳಿಸಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರದ ವಿಜಯ ನಗರ ಬಡಾವಣೆಯಲ್ಲಿ ವಿಜಯನಗರ ಅಕ್ವೇಟಿಕ್ಸ್ ಮತ್ತು ಯುವ ಸಬಲೀಕರಣ ಕ್ರೀಡಾ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸಾಗರ ಸಿದ್ದಾಪುರ ತಾಲ್ಲೂಕು ಮಟ್ಟದ ಈಜು ಸ್ಪರ್ಧೆಯಲ್ಲಿ ಅವರು ತರಬೇತುದಾರರನ್ನು ಅಭಿನಂದಿಸಿ ಮಾತನಾಡಿದಂತ ಅವರು, ವಿಜಯ ನಗರ ಈಜುಕೊಳ ಈಜು ಕಲಿಯುವ ಮಕ್ಕಳಿಗೆ ಪ್ರಯೋಜನಕಾರಿಯಾಗಿದೆ. ಮಕ್ಕಳಿಗೆ ಪಠ್ಯದ ಜೊತೆ ಕ್ರೀಡೆ ಸೇರಿ ವಿವಿಧ ಪೂರಕ ಚಟುವಟಿಕೆಗಳು ಅಗತ್ಯ. ಈಜುಕೊಳ ಅಭಿವೃದ್ದಿಗೆ ನಗರಸಭೆಯಿಂದ ಅಗತ್ಯ ಸಹಕಾರ ನೀಡಲಾಗುತ್ತದೆ ಎಂದರು.
ನಗರ ಪ್ರಾಧಿಕಾರದ ಸದಸ್ಯ ಸುರೇಶ್ ಬಾಬು ಮಾತನಾಡಿ, ಶಾಸಕರು ವಿಜಯ ನಗರ ಈಜುಕೊಳವನ್ನು ಸುಮಾರು 45 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ದಿಪಡಿಸಿದ್ದಾರೆ. ಮಕ್ಕಳಿಗೆ ಈಜು ಕಲಿಯಲು ಇಲ್ಲಿ ಎಲ್ಲ ರೀತಿಯ ಸೌಲಭ್ಯ ಕಲ್ಪಿಸಲಾಗಿದ್ದು ಸಿದ್ದರಾಜು ನೇತೃತ್ವದ ತಂಡ ಈಜು ಸ್ಪರ್ಧೆ ನಡೆಸಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಗರ ನಗರಸಭೆ ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾಧ ಅರವಿಂದ ರಾಯ್ಕರ್, ರವಿ ಲಿಂಗನಮಕ್ಕಿ, ಸಿದ್ದರಾಜು, ಗಿರಿಭಟ್ಟ ಇನ್ನಿತರರು ಹಾಜರಿದ್ದರು.
ವಿಶೇಷ ಚೇತನ ಮಕ್ಕಳು ಸಮಾಜದ ಆಸ್ತಿ, ಆರೈಕೆ ಪುಣ್ಯದ ಕೆಲಸ: ಸಾಗರ ನಗರಸಭೆ ಸದಸ್ಯ ಎಲ್.ಚಂದ್ರಪ್ಪ
ಶಿವಮೊಗ್ಗ: ಸಾಗರದ ಶೃಂಗೇರಿ ಶಂಕರಮಠದ ಪ್ರಧಾನ ಅರ್ಚಕ ವೇದಬ್ರಹ್ಮ ಮಹಾಬಲೇಶ್ವರ ಭಟ್ ವಿಧಿವಶ