ಶಿವಮೊಗ್ಗ: ಜಿಲ್ಲೆಯ ಸಾಗರದ ಶೃಂಗೇರಿ ಶಂಕರಮಠದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಮಹಾಬಲೇಶ್ವರ ಭಟ್ (78) ಶನಿವಾರ ನಿಧನರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
ಕಳೆದ ಹಲವು ವರ್ಷಗಳಿಂದ ಸಾಗರದಲ್ಲಿ ನೆಲೆಸಿದ್ದ ಮಹಾಬಲೇಶ್ವರ ಭಟ್ಟರು ರೈಲ್ವೆ ಸ್ಟೇಷನ್ ಸಮೀಪದ ಶಾರದಾಂಬಾ ದೇವಸ್ಥಾನದಲ್ಲಿ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ನಂತರ ಸಾಗರದ ಶೃಂಗೇರಿ ಶಂಕರಮಠದಲ್ಲಿ ಪ್ರಧಾನ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದರು. ಜ್ಯೋತಿಷ್ಯ ಶಾಸ್ತçದಲ್ಲಿ ಅತ್ಯಂತ ಪರಿಣಿತರಾದ ಅವರು ಭಕ್ತರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದ್ದರು.
ಮಹಾಬಲೇಶ್ವರ ಭಟ್ಟ ಅವರ ನಿಧನಕ್ಕೆ ಶೃಂಗೇರಿ ಶಾರದಾಪೀಠದ ಮುಖ್ಯ ಆಡಳಿತಾಧಿಕಾರಿ ಪಿ.ಎ.ಮುರಳಿ, ಸಾಗರ ಶಂಕರಮಠದ ಧರ್ಮದರ್ಶಿ ಅಶ್ವಿನಿಕುಮಾರ್, ಶಾರದಾಂಬಾ ದೇವಸ್ಥಾನ ಸಮಿತಿ ಅಧ್ಯಕ್ಷ ವಿ.ಚಂದ್ರಶೇಖರ್, ಭಗವದ್ಗೀತೆ ಅಭಿಯಾನ ಸಮಿತಿ ತಾಲ್ಲೂಕು ಅಧ್ಯಕ್ಷ ಕೆ.ವಿ.ಜಯರಾಮ್, ಮಾ.ಸ.ನಂಜುಂಡಸ್ವಾಮಿ ಇತರರು ಸಂತಾಪ ಸೂಚಿಸಿದ್ದಾರೆ.
BREAKING: ಅ.31ರವರೆಗೆ ರಾಜ್ಯಾಧ್ಯಂತ ‘ಜಾತಿಗಣತಿ ಸಮೀಕ್ಷೆ’ ವಿಸ್ತರಣೆ, ಶಿಕ್ಷಕರನ್ನು ಗಣತಿಕಾರ್ಯದಿಂದ ಬಿಡುಗಡೆ
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಪ್ರಕಟ: ಭಾರೀ ಮತಗಳ ಅಂತರದಿಂದ ಲಕ್ಷ್ಮಣ್ ಸವದಿ ಗೆಲುವು